SUDDIKSHANA KANNADA NEWS/ DAVANAGERE/ DATE:10-01-2025
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಸೇರಿದಂತೆ ಆರೋಪಿಗಳು ಕೋರ್ಟ್ ಗೆ ಹಾಜರಾದರು.
ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಕೋರ್ಟ್ ಮುಂದೂಡಲಾಗಿದೆ. ಆರೋಪಿ 15 ಹಾಗೂ 17ರಿಗೆ ಶೂರಿಟಿ ನೀಡುವಂತೆ ಕೋರ್ಟ್ ನಿರ್ದೇಶನ ನೀಡಿದೆ.
57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 17 ಆರೋಪಿಗಳು ಆಗಮಿಸಿದ್ದರು. ಫೆಬ್ರವರಿ 27ಕ್ಕೆ ಡಿ ಗ್ಯಾಂಗ್ ವಿಚಾರಣೆ ಮುಂದೂಡಿದ್ದು, ಆರೋಪಿಗಳು ನಿರಾಳಾರಾಗಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್ ಕಾಣುತ್ತಿದ್ದಂತೆ ಕಣ್ಣೀರು ಹಾಕಿದರು. ಈ ವೇಳೆ ದರ್ಶನ್ ತೂಗುದೀಪ ಸಂತೈಸುವ ಕೆಲಸ ಮಾಡಿದರು.
ಎಸ್ ಪಿಪಿ ಪ್ರಸನ್ನಕುಮಾರ್ ಪರ ಸಚಿನ್ ಹಾಜರಾಗಿದ್ದರು. ಜಾಮೀನು ನೀಡುವಾಗ ಸೆಷನ್ ಕೋರ್ಟ್ ನ ಟ್ರಯಲ್ ಗೆ ಕಡ್ಡಾಯವಾಗಿ ಆಗಮಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ದರ್ಶನ್ ತೂಗುದೀಪ ಆಗಮಿಸುವ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.