SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ವಿದ್ಯುತ್ ಸ್ಪರ್ಷಿಸಿ ಒಂದು ವರ್ಷ ಎಂಟು ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.
ಒಂದು ವರ್ಷ ಎಂಟು ತಿಂಗಳ ಮಗು ಮಂಜುನಾಥ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮನೆಗೆ ನೀರು ತುಂಬಿಸಿಕೊಳ್ಳುವ ಸಲುವಾಗಿ ಮಗುವಿನ ತಾಯಿ ಮೋಟಾರ್ ಅಳವಡಿಸಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ಮೋಟಾರ್ ಸಂಪರ್ಕಿಸುವ ವೈರ್ ಅನ್ನು ಮುಟ್ಟಿದೆ. ಈ ವೇಳೆ ವಿದ್ಯುತ್ ಶಾಕ್ ತಗಲಿದೆ.
ಕೂಡಲೇ ಸ್ಥಳದಲ್ಲಿದ್ದವರು ಮಗುವನ್ನು ಉಪಚರಿಸಿ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದರು. ಮಗು ಗಂಭೀರವಾಗಿದ್ದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಮಗುವನ್ನು ಕಳೆದುಕೊಂಡ ತಂದೆ ಹಾಗೂ ತಾಯಿ, ಸಂಬಂಧಿಕರು, ಕುಟುಂದವರ ಆಕ್ರಂದನ ಮುಗಿಲು ಮುಟ್ಟಿತ್ತು. ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಪೋಷಕರ ಅಳು ನಿಲ್ಲಲೇ ಇಲ್ಲ.
ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನೂ ತಪ್ಪು ಮಾಡದ ಒಂದು ವರ್ಷ ಎಂಟು ತಿಂಗಳ ಕಂದಮ್ಮ ಈ ರೀತಿ ಸಾವನ್ನಪ್ಪಿರುವುದು ಬೇಸರದ ಸಂಗತಿಯೇ ಸರಿ.