SUDDIKSHANA KANNADA NEWS/ DAVANAGERE/ DATE:18-10-2023
ಚಿದಂಬರಂ ಸ್ಟೇಡಿಯಂ: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ವಿಶ್ವಕಪ್ ಕ್ರಿಕೆಟ್ (Cricket World Cup)ನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 149 ರನ್‌ಗಳ ಅಂತರದಿಂದ ನ್ಯೂಜಿಲ್ಯಾಂಡ್ ತಂಡವು ಭರ್ಜರಿ ಜಯ ದಾಖಲಿಸಿದೆ.
READ ALSO THIS STORY:
ಗೋಧಿ (Wheat) ಬೆಳೆಗಾರರಿಗೆ ಬಂಪರ್ ಸುದ್ದಿ, ಪ್ರತಿ ಕ್ವಿಂಟಾಲ್ ಗೆ 150 ರೂ. ಹೆಚ್ಚಳ, ರೈತರಿಗೆ ಸಿಗಲಿದೆ 2275 ರೂ. ಬೆಂಬಲ ಬೆಲೆ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಈ ಮೂಲಕ ನ್ಯೂಜಿಲೆಂಡ್ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ವಿಲ್ ಯಂಗ್ (54), ಟಾಮ್ ಲಾಥಮ್ (68) ಮತ್ತು ಗ್ಲೆನ್ ಫಿಲಿಪ್ಸ್ (71) ಅವರ ಅರ್ಧಶತಕಗಳ ನೆರವಿನಿಂದ ಕಿವೀಸ್ 6 ವಿಕೆಟ್‌ಗೆ 288 ರನ್ ಗಳ ಬೃಹತ್
ಮೊತ್ತ ಪೇರಿಸಿತು.
ಆದ್ರೆ, ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಕೇವಲ 34.4 ಓವರ್‌ಗಳಲ್ಲಿ 139 ರನ್‌ಗಳಿಗೆ ಸರ್ವಪತನ ಕಂಡಿತು. ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ ತಂಡವು ಅದೇ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು. ಸಂಘಟಿತ ಪ್ರಯತ್ನ ಮಾಡುತ್ತೆ, ಹೋರಾಟ ರೋಚಕವಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದ್ರೆ, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ.
ವೀರೋಚಿತ ಗೆಲುವು ಪುನರಾವರ್ತಿಸಲು ಅಫ್ಘಾನಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ರಹಮತ್ ಶಾ (36) ಮಾತ್ರ ಹೋರಾಟದ ಪ್ರದರ್ಶನ ತೋರಿದರೂ ತಂಡದ ಮೊತ್ತ ನೂರು ದಾಟುವಲ್ಲಿ ನೆರವಾದರು. ನ್ಯೂಜಿಲ್ಯಾಂಡ್ ಪರ ಲಾಕಿ ಫರ್ಗುಸನ್ 3, ಮಿಚೆಲ್ ಸಾಂಟನರ್ 3 ಹಾಗೂ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಹಾಗೂ ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರೂ ಕಿವೀಸ್ ಬ್ಯಾಟ್ಸಮನ್ ಗಳ ಅಬ್ಬರದಿಂದ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್ ತಂಡವನ್ನು ಮಣಿಸಿ ಅಚ್ಚರಿ ಫಲಿತಾಂಶ ಕೊಟ್ಟಿದ್ದ ಅಫ್ಘಾನಿಸ್ತಾನ ತಂಡವು ನ್ಯೂಜಿಲ್ಯಾಂಡ್
ತಂಡದ ವಿರುದ್ಧ ಹೀನಾಯ ಸೋಲು ಕಂಡಿತು.