SUDDIKSHANA KANNADA NEWS/ DAVANAGERE/ DATE:13-02-2025
ಬೆಂಗಳೂರು: ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಕೂಡಲೇ ಕಡಿವಾಣ ಹಾಕಿ ಎಂದು ರಾಜ್ಯ ಬಿಜೆಪಿ ಘಟಕ ಆಗ್ರಹಿಸಿದೆ.
ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ರಾಜ್ಯದಲ್ಲಿ ದಿನಕ್ಕೊಬ್ಬ ಬಡವ-ರೈತ-ಶ್ರಮಿಕನ ಅಮೂಲ್ಯ ಜೀವ ಬಲಿಯಾಗುತ್ತಿದೆ. ಕೊಡಗಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೆ, ನಿಮ್ಮ ನಿಸ್ತೇಜ ಸರ್ಕಾರದ ನಿರ್ಲಜ್ಜ ಆಡಳಿತಕ್ಕೆ ಇನ್ನೆಷ್ಟು ಕನ್ನಡಿಗರು ತಮ್ಮ ಅಮೂಲ್ಯ ಜೀವಗಳನ್ನು ಬಲಿ ಕೊಡಬೇಕು? ಎಂದು ಪ್ರಶ್ನಿಸಿರುವ
ಬಿಜೆಪಿಯು ಕೂಡಲೇ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದೆ.