SUDDIKSHANA KANNADA NEWS/ DAVANAGERE/ DATE:24-03-2025
ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಅಧಿಕಾರದ ದಾಹಕ್ಕಾಗಿ ಹನಿಟ್ರ್ಯಾಪ್ ಮಾಡಿರುವ ಆರೋಪ ಕಾಂಗ್ರೆಸ್ ಪಕ್ಷದೊಳಗೇ ಕೇಳಿಬಂದಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ವರದಿ ಕೇಳಿರುವುದು ಹನಿಟ್ರ್ಯಾಪ್ನಲ್ಲಿ ಕಾಂಗ್ರೆಸ್ ನಾಯಕರದ್ದೇ ಕೈವಾಡವನ್ನು ಪುಷ್ಟೀಕರಿಸಿದೆ. ಹಾಯ್, ಹಲೋ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ
ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರತ್ತ ಹನಿಟ್ರ್ಯಾಪ್ ಪ್ರಕರಣ ತಿರುಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಬಣದ ನಾಯಕರ ವಿರುದ್ಧವೇ ಹನಿಟ್ರ್ಯಾಪ್ ನಡೆದಿರುವುದರಿಂದ ಸಿದ್ದರಾಮಯ್ಯ ಬಣದ ನಾಯಕರು, ಡಿಕೆಶಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದೆ.
ಈ ಹಿಂದೆಯೂ ಡಿಕೆಶಿ ಅವರ ಮೇಲೆ ಸಿಡಿ ಆರೋಪ ಕೇಳಿ ಬಂದಿತ್ತು, ಆಗ ಮೌನವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ತನ್ನದೇ ಸಚಿವರ ಮೇಲೆ ಹನಿಟ್ರ್ಯಾಪ್ ನಡೆದಿರುವುದರಿಂದ ಎಚ್ಚೆತ್ತುಕೊಂಡು ವರದಿ ಕೇಳಿದೆ ಎಂದು ಹೇಳಿದೆ.