SUDDIKSHANA KANNADA NEWS/ DAVANAGERE/ DATE:02-04-202
ದಾವಣಗೆರೆ: ಜನರು ಕೇಳದೇ ಇದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಆರನೇ ಗ್ಯಾರಂಟಿ ನೀಡಿದೆ ಎಂದು ದೂಡಾ ಮಾಜಿ ಅಧ್ಯಕ್ಷ, ವಕೀಲರಾದ ಎ. ವೈ. ಪ್ರಕಾಶ್ ಕಿಡಿಕಾರಿದ್ದಾರೆ.
ಐದು ಗ್ಯಾರೆಂಟಿಗಳನ್ನು ಪಡೆಯುವವರು ನೀವೆಲ್ಲ ಖುಷಿಯಾಗಿದ್ದೀರಿ, ನಮ್ ಸರ್ಕಾರ ಯಾವಾಗ ಕೊಡುತ್ತೋ ಆವಾಗ ನೀವು ಪಡೆಯಬೇಕು. ನಮ್ಮ ಸರ್ಕಾರ ಕೊಟ್ಟಾಗ ಖುಷಿಯಾಗಿ ಪಡೆಯುತ್ತೀರಿ. ಆರನೇ ಗ್ಯಾರಂಟಿ ಯಾಕೆ ವಿರೋಧಿಸುತ್ತೀರಿ.
ಆರನೇ ಗ್ಯಾರೆಂಟಿಯಿಂದ ನಿಮ್ಮಿಂದ ಪಡೆಯುವುದನ್ನೇ ಈ ಐದು ಗ್ಯಾರಂಟಿಗೆ ನಾವು ಕೊಡುತ್ತೇವೆ. 6ನೇ ಗ್ಯಾರಂಟಿಯನ್ನು ವಿರೋಧಿಸುವ ನೀವು ಪಡೆಯುತ್ತಿರುವ ಐದು ಗ್ಯಾರಂಟಿಗಳನ್ನು ವಿರೋಧಿಸಿ. ಈ 6ನೇ ಗ್ಯಾರಂಟಿ ಕಡ್ಡಾಯ. ಆಗಿಂದಾಗೆ
ವರ್ಷದಲ್ಲಿ ನಮಗೆ ಇಷ್ಟ ಬಂದಾಗ ನಾವು ಆರನೇ ಗ್ಯಾರಂಟಿ ಜಾರಿ ಮಾಡುವುದು ಖಚಿತ ಎಂದು ವ್ಯಂಗ್ಯವಾಡಿದ್ದಾರೆ.
ನೀವು ಎಷ್ಟೇ ಪ್ರತಿಭಟನೆ ಮಾಡಿದರೂ ಸಹ ನಾವು ಬಗ್ಗಲ್ಲ ಜಗ್ಗಲ್ಲ . ನಿಮ್ಮ ಪ್ರತಿಭಟನೆಯಿಂದ ನೀವು ಸುದ್ದಿಯಾಗುತ್ತೀರಿ. ನಿಮ್ಮ ಫೋಟೋಗಳು ಪತ್ರಿಕೆಗಳ ಮುಖಪುಟಗಳಲ್ಲಿ ಬರುತ್ತವೆ. ಮತ್ತು ಮಾಧ್ಯಮಗಳಲ್ಲಿ ಬರುತ್ತವೆ. ಆದರೂ ನಾವು 6ನೇ ಗ್ಯಾರಂಟಿಯನ್ನು ಕೊಟ್ಟೆ ಕೊಡುತ್ತೇವೆ. ಇದು ಕಾಂಗ್ರೆಸ್ ಸರ್ಕಾರದ ಧೋರಣೆ. ಈ ಬೆಲೆ ಏರಿಕೆ ಎಂಬ ಆರನೇ ಗ್ಯಾರಂಟಿಯಿಂದ ಕಂಗಾಲಾಗಿರುವ ಕರ್ನಾಟಕದ ಜನತೆ ಐದು ಗ್ಯಾರಂಟಿಗಳನ್ನು ಪಡೆಯುವವರು ಮತ್ತು ಪಡೆಯದವರು ಸಹ 2028 ರ ವರೆಗೆ ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕು. ಅಲ್ಲಿಯವರೆಗೆ ಗ್ಯಾರಂಟಿಗಳನ್ನು ಪಡೆಯುತ್ತಿರುವವರು ಮತ್ತು ಪಡೆಯದವರು ಯಾವ ಗ್ಯಾರೆಂಟಿಯಿಂದ ಎಷ್ಟು ಪಡೆಯುತ್ತೇವೆ, ಬೆಲೆ ಏರಿಕೆ ಎಂಬ 6ನೇ ಗ್ಯಾರಂಟಿಯಿಂದ ನಾವು ಸರ್ಕಾರಕ್ಕೆ ವಾಪಸ್ ಎಷ್ಟು ಕೊಡುತ್ತೇವೆ ಎಂಬುದನ್ನು ಲೆಕ್ಕ ಬರೆಯುತ್ತಿರಬೇಕಾದ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಎ. ವೈ. ಪ್ರಕಾಶ್ ಹೇಳಿದ್ದಾರೆ.