SUDDIKSHANA KANNADA NEWS/ DAVANAGERE/ DATE-11-06-2025
ದಾವಣಗೆರೆ: ಅಗ್ನಿ ಶಾಮಕ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ ಡೈರೆಕ್ಟರ್ ಜನರಲ್ ಇವರು ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರನ್ನು ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೊಂದಾಯಿಸಿಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೆಬ್‍ಸೈಟ್ www.civildefencewarriors.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 011-20863646 ಮತ್ತು ಇಮೇಲ್ adgcom.dgfs-cdhg@gov.in ಇವರನ್ನು ಸಂಪರ್ಕಿಸಬಹುದು, ನೋಂದಾಯಿಸಿಕೊಂಡಂತಹ ಮಾಜಿ ಸೈನಿಕರು ಶೀಘ್ರವಾಗಿ ಕಚೇರಿಯಲ್ಲಿ ಹೆಸರನ್ನು ದಾಖಲಿಸಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.