ಬೆಳಗಾವಿಯ ಸುವರ್ಣ ಸೌಧದಲ್ಲಿ ಇತ್ತೀಚೆಗೆ ಮುಕ್ತಾಯವಾದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಇದಾದ ಬಳಿಕ ಸುವರ್ಣ ಸೌಧಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ನುಗ್ಗಿ ದಾಂಧಲೆ ಮಾಡಿದ್ದರು. ರವಿ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಸಿಟಿ ರವಿ ಅವರನ್ನು ಸುವರ್ಣ ಸೌಧದ ಗೇಟ್ ಬಳಿ ವಶಕ್ಕೂ ಪಡೆದುಕೊಂಡಿದ್ದರು. ಇನ್ನು ಈ ತನಿಖೆಯನ್ನು ಸರ್ಕಾರ ಸಿಐಡಿಗೂ ವರ್ಗಾವಣೆ ಮಾಡಿತ್ತು. ಇದೀಗ ಸಿಐಡಿ ಯಿಂದ ನೀಡಿದ ನೊಟೀಸ್ ಹಿನ್ನೆಲೆ ಇಂದು ಜ.9 ಸಿಟಿ ರವಿ ವಿಚಾರಣೆಗೆ ಹಾಜರಾಗಿದ್ದಾರೆ
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮಾತಿನ ಚಕಾಮಕಿ, ಬಳಿಕ ಭಾರೀ ಸಂಘರ್ಚಕ್ಕೂ ಕಾರಣವಾಗಿತ್ತು. ಇನ್ನು ಈ ಪ್ರಕರಣವನ್ನು ಸಿಐಡಿಗೂ ಒಪ್ಪಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಿಟಿ ರವಿ ಅವರನ್ನು ತನಿಖಾಧಿಕಾರಿ ಕೇಶವಮೂರ್ತಿ ವಿಚಾರಣೆ ನಡೆಸಿದ್ದಾರೆ.
ಸಿಐಡಿ ವಿಚಾರಣೆ ಬಳಿಕ ಸಿಟಿ ರವಿ, ನನ್ನ ಮೇಲೆ ಸುವರ್ಣ ಸೌಧದ ಮೊಗಸಾಲೆಯಿಂದ ಪರಿಷತ್ ಕಚೇರಿಗೆ ಹೋಗುವಾಗ ಹಲ್ಲೆ ಮಾಡಲು ಬಂದಿದ್ರು. ಇನ್ನು ಈ ಬಗ್ಗೆ ಸಭಾಪತಿಗಳಿಗೆ ದೂರು ನೀಡಲಾಗಿತ್ತು. ಅದರ ಬಗ್ಗೆ ಇಂದು ವಿಚಾರಣೆ ಇತ್ತು ಎಂದು ಹೇಳಿದ್ದಾರೆ.
ಇನ್ನು ವಿಚಾರಣೆ ವೇಳೆ, ಯಾರು ಹಲ್ಲೆಮಾಡಿದ್ರು ಅನ್ನೋ ಮಾಹಿತಿ ನೀಡಿದ್ದೇನೆ. ಮೊದಲು ಸುವರ್ಣ ಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ಹಲ್ಲೆ ಮಾಡಿದ್ರು. ಆ ಬಳಿಕ ವಿಧಾನಸಭೆ ವಿಪಕ್ಷ ನಾಯಕರ ಜೊತೆ ಚರ್ಚೆ ಮುಗಿಸಿ ಹೊರಬರುವಾಗ ಎರಡನೇ ಬಾರಿ ಹಲ್ಲೆ ಆಯ್ತು. ಇದಕ್ಕೆಲ್ಲಾ ಸಿಸಿ ಕ್ಯಾಮೆರಾ ದಾಖಲೆಗಳು ಕೂಡ ಇದೆ. ಈ ಪ್ರಕರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ, ಚನ್ನರಾಜ್ ಹಟ್ಟಿ ಹೊಳಿ ಪಿಎ ಇಬ್ಬರ ಹೆಸರು ಹೇಳಿದ್ದೇನೆ ಎಂದರು.
ಸಿಟಿ ರವಿ ಸಿಸಿ ಕ್ಯಾಮೆರಾ ಫೂಟೇಜ್ ನೀಡಿದ್ರೆ ಗುರ್ತಿಸುತ್ತೇನೆ ಅಂತಾನೂ ಹೇಳಿಕೊಂಡಿದ್ದಾರೆ. ವಿಧಾನಪರಿಷತ್ನಲ್ಲಿ ಆಗಿದೆ ಅಂತ ದೂರು ನೀಡಿದ್ದಾರೆ. ವಿಧಾನಪರಿಷತ್ನಲ್ಲಿ ಅಧಿಕಾರ ಇರೋದು ಸಭಾಪತಿಗಳಿಗೆ. ಈ ಬಗ್ಗೆ ಸಭಾಪತಿಗಳು ಸಹ ಕ್ರಮ ಕೈಗೊಳ್ಳಲಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆ ಬಗ್ಗೆ ದೂರು ಸಲ್ಲಿಸಿದ್ದೇನೆ. ಆದ್ರೆ ಇವತ್ತಿಗೆ ಹಲ್ಲೆ ನಡೆದು ಇಪ್ಪತ್ತು ದಿನಗಳಾದ್ರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.