SUDDIKSHANA KANNADA NEWS/ DAVANAGERE/ DATE:30-08-2024
ದಾವಣಗೆರೆ: ಆಂಧ್ರಪ್ರದೇಶದ ಕರ್ನೂಲ್ ಸ್ಕಂದ ಶಾಪಿಂಗ್ ಮಾಲ್, ಓಲ್ಡ್ ಟಾಕೀಸ್ ವಿಳಾಸದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕೋಡೆ ರಮಣಯ್ಯ ಎಂಬಾತ ಈ ಪ್ರೈವೇಟ್ ಲಿಮಿಟೆಡ್ನಲ್ಲಿ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ನಂಬಿಸಿ 106 ಗ್ರಾಹಕರಿಂದ ರೂ.4,79,99,000 ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ರಮೇಶಪ್ಪ ದೂರು ನೀಡಿದ್ದಾರೆ.
ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ದಾವಣಗೆರೆ ಸಿಐಡಿ, ಸಿಐಯು ಘಟಕದಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪಾಧೀಕ್ಷಕ ಮಾಲತೇಶ್ ಎನ್.ಕೂನಬೇವು ತಿಳಿಸಿದ್ದಾರೆ.
ರಮೇಶಪ್ಪನಿಗೆ ಪರಿಚಯಸ್ಥರಾದ ಟಿ.ವಿ.ಶೇಷಯ್ಯ ಮತ್ತು ಎಂ.ಏಳುಕೊಂಡಲು ಇವರು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ತಿಳಿಸಿ ಕಂಪನಿಯ ಬ್ಯಾಂಕ್ ಖಾತೆ 114563300000374 ಗೆ ಹಣ ವರ್ಗಾವಣೆ ಮಾಡಿದ್ದು 60 ದಿನಗಳ ನಚಿತರ ರಮೇಶಪ್ಪ ರೂ.1,96,000 ರೂ.ಗಳನ್ನು ವಾಪಸ್ ಪಡೆದಿದ್ದರು. ನಾನು ಇಟ್ಟ ಠೇವಣಿಗೆ ಬಾಂಡ್ ಪೇಪರ್ ಮೇಲೆ ಅಗ್ರಿಮೆಂಟ್ ಸಹ ನೀಡಿರುತ್ತಾರೆ. ಇದನ್ನು ನಂಬಿ ನಾನು ಸೇರಿದಂತೆ ಸ್ನೇಹಿತರಿಗೆ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರಿಗೆ ತಿಳಿಸಿ ಒಟ್ಟು 106 ಜನರಿಂದ ರೂ. ರೂ.4,79,99,000 ಹೂಡಿಕೆ ಮಾಡಿಸಲಾಗಿತ್ತು.
ಈ ಮೊತ್ತಕ್ಕೆ 60 ದಿನಗಳ ನಂತರ ಯಾವುದೇ ಹಣ ವಾಪಸ್ ನೀಡಿರುವುದಿಲ್ಲ. ಇದರಿಂದ ಇಷ್ಟು ಗ್ರಾಹಕರು ಕಂಪನಿಯನ್ನು ನಂಬಿ ಮೋಸ ಹೋಗಿರುತ್ತಾರೆ.
ಪ್ರಕರಣವು ಪ್ರಸ್ತುತ ದಾವಣಗೆರೆ ಸಿಐಡಿ, ಸಿಐಯು ಘಟಕದಲ್ಲಿ ತನಿಖೆ ನಡೆಯುತ್ತಿದ್ದು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಲ್ಲಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾಡಿರುವುದಾಗಿ ತಿಳಿದು ಬಂದಿದ್ದು ಈ ಸಂಸ್ಥೆಯ
ಹೆಸರಿನಲ್ಲಿ ಆಸ್ತಿ ಇದ್ದಲ್ಲಿ ಮಾಹಿತಿ ನೀಡಲು ಮತ್ತು ಕಂಪನಿಯಿಂದ ಮೋಸ ಹೋಗಿದ್ದಲ್ಲಿ 9480800192 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.