SUDDIKSHANA KANNADA NEWS/ DAVANAGERE/ DATE:08-12-2024
ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಂಡು ಬಿಗ್ ಬಾಸ್ 11 ನೇ ಸೀಸನ್ ನಲ್ಲಿ ಇಂದು ಚೈತ್ರಾ ಕುಂದಾಪುರ ಔಟ್ ಆಗಿದ್ದಾರೋ ಇಲ್ಲವೋ ಎಂಬ ಚೆಕ್ ಮೆಟ್ ಇಡಲಾಗಿದೆ. ಆದ್ರೆ, ಐಶ್ವರ್ಯ ಸೇಫ್ ಆಗಿದ್ದಾರೆ.
ಈ ವಾರದ ಬಿಗ್ ಬಾಸ್ ಮನೆಯಿಂದ ಹೊರ ಬರುವವರು ಯಾರು ಎಂಬ ಕುತೂಹಲ ಗರಿಗೆದರಿತ್ತು. ಇನ್ನು ಚೈತ್ರಾ ಕುಂದಾಪುರ, ಐಶ್ವರ್ಯ, ಸುರೇಶ್ ಮೂವರ ಪೈಕಿ ಒಬ್ಬರು ಹೊರಗಡೆ ಬರುವ ಹಂತಕ್ಕೆ ಬಂದಿದ್ದರು.
ಅಂತಿಮವಾಗಿ ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ಇಬ್ಬರಲ್ಲಿ ಒಬ್ಬರು ಉಳಿಯುತ್ತಾರೋ ಅಥವಾ ಇಬ್ಬರೋ ಹೊರ ಹೋಗುತ್ತಾರೋ ಎಂಬ ಕುತೂಹಲ ಗರಿಗೆದರಿತ್ತು. ಅಂತಿಮವಾಗಿ ಚೈತ್ರಾ ಕುಂದಾಪುರ ಔಟ್ ಆಗಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ, ಐಶ್ವರ್ಯ ಸೇಫ್ ಆಗಿದ್ದಾರೆ.
ಚೈತ್ರಾ ಕುಂದಾಪುರ ವಿವಾದಾತ್ಮಕ ಭಾಷಣದಿಂದ ರಾಜ್ಯದಲ್ಲಿ ಸದ್ದು ಮಾಡಿದ್ದರು. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಸೇರಿದ್ದರು. ಮೊದಲಿನಿಂದಲೂ ಆರ್ಭಟಿಸುತ್ತಿದ್ದ ಚೈತ್ರಾ ಕುಂದಾಪುರ ಕೆಲ ದಿನಗಳಿಂದ ಆಟದಲ್ಲಿ ಮಂಕಾಗಿದ್ದರು. ಐಶ್ವರ್ಯ ಸೇಫ್ ಆಗುತ್ತಿದ್ದಂತೆ ಕಣ್ಣೀರು ಸುರಿಸಿದರು. ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಬೇಕೆಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಚೈತ್ರಾ ಕುಂದಾಪುರ ಸೇಫ್ ಆಗಬೇಕೆಂದು ಮನೆಯಲ್ಲಿನ ಬಹುತೇಕ ಸ್ಪರ್ಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅಂತಿಮವಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರ ಬಂದರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಹನ್ನೊಂದನೆಯ ವಾರದ ಮನೆಯ ಕ್ಯಾಪ್ಟನ್ ಆಗಿ ನಟಿ ಗೌತಮಿ ಜಾಧವ್ ಆಯ್ಕೆಯಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ. ಬಿಗ್ ಬಾಸ್ನಲ್ಲಿ ಬರೀ ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ಇದ್ದು, ಚೈತ್ರಾ ಕುಂದಾಪುರ ಹೊರ ಬರುವಂತೆ ತೋರಿಸಲಾಗಿದೆ. ಆದ್ರೆ, ಶೋನ ಕೊನೆಯಲ್ಲಿ ತೋರಿಸಿಲ್ಲ.
ವಾರದ ಟಾಸ್ಕ್ ಗೆಲ್ಲದಿದ್ದರೂ ಸಹ ಮನೆಯ ಕ್ಯಾಪ್ಟನ್ ಆಗುವ ಅವಕಾಶ ಗೌತಮಿಗೆ ಒಲಿದು ಬಂದಿತ್ತು. ವಾರದ ಆಟ ಇಂಟ್ರಸ್ಟಿಂಗ್ ಆಗಿದ್ದು, ವಾರಾಂತ್ಯ ಬರುತ್ತಿದ್ದಂತೆ ಎಲಿಮಿನೇಷನ್ ಲೆಕ್ಕಾಚಾರ ಆರಂಭವಾಗಿಬಿಡುತ್ತದೆ. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಉತ್ತಮ ರೇಟಿಂಗ್ ಕೂಡ ಪಡೆದಿದೆ. ಅಂತಿಮವಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದರು. ಸ್ಪೆಷಲ್ ರೂಂನಲ್ಲಿ ಕೂರಿಸಿದ್ದು, ಸುರೇಶ್, ಐಶ್ವರ್ಯ ಸೇಫ್ ಆಗಿದ್ದಾರೆ.
ಕಳೆದ ವಾರ ಮನೆಯಿಂದ ಹೊರಹೋಗಲು ಆಯ್ಕೆಯಾದವರ ಪೈಕಿ ಕೊನೆಯದಾಗಿ ಐಶ್ವರ್ಯಾ ಹಾಗೂ ಶಿಶಿರ್ ಇದ್ದರು. ಆದರೆ ಇಂಟ್ರೆಸ್ಟಿಂಗ್ ಎಂಬಂತೆ ಶೋಭಾ ಶೆಟ್ಟಿ ತಾವೇ ಸ್ವತಃ ಅನಾರೋಗ್ಯ ಕಾರಣ ನೀಡಿ ಮನೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದರು. ಸೇಫ್ ಆಗುವುದಾಗಿ ಕಿಚ್ಚ ಸುದೀಪ್ ಹೇಳುತ್ತಿದ್ದಂತೆ ಐಶ್ವರ್ಯ ಕಣ್ಣೀರು ಹಾಕಿದರು. ಐಶ್ವರ್ಯ ಸೇಫ್ ಆಗಿದ್ದರೆ, ಚೈತ್ರಾ ಕುಂದಾಪುರ ಇದ್ದಾರೋ ಇಲ್ಲವೋ ಎಂಬುದು ನಾಳಿನ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.