SUDDIKSHANA KANNADA NEWS/ DAVANAGERE/ DATE:24-02-2025
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 15 ಆರೋಪಿಗಳು ಕೋರ್ಟ್ ಗೆಹಾಜರಾದರು. ಏಪ್ರಿಲ್ 8ಕ್ಕೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.
ಸಿಸಿಹೆಚ್ ಕೋರ್ಟ್ ಗೆ ದರ್ಶನ್ ತೂಗುದೀಪ ಆಗಮಿಸುವ ವೇಳೆ ಭಾರೀ ಬಿಗಿ ಭದ್ರತೆ ಒದಗಿಸಲಾಗಿತ್ತು. 15 ಆರೋಪಿಗಳು ಕೋರ್ಟ್ ಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಕೋರ್ಟ್ ಗೆ ಬಂದ ಡಿ ಗ್ಯಾಂಗ್ ವಿಚಾರಣೆ ಆರಂಭವಾಗಲಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಎರಡನೇ ಆರೋಪಿ ದರ್ಶನ್ ತೂಗುದೀಪ ಸೇರಿದಂತೆ 15 ಮಂದಿ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿದ್ದರು.
ಕಾರಿನಿಂದ ಇಳಿದ ದರ್ಶನ್ ತೂಗುದೀಪ ಕುಂಟುತ್ತಲೇ ಆಗಮಿಸಿದರು. ಬೆನ್ನು ನೋವಿನಿಂದ ಬಳಲುತ್ತಿರುವ ಚಾಲೆಂಜಿಂಗ್ ಸ್ಟಾರ್ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಕೋರ್ಟ್ ನಲ್ಲಿ ಜಾಮೀನಿನ ಅರ್ಜಿ ನಡೆಯುತ್ತಿದ್ದು, ಜಾಮೀನು ಮುಂದುವರಿಸುವಂತೆ ದರ್ಶನ್ ಪರ ವಕೀಲರು ಮನವಿ ಮಾಡಲಿದ್ದಾರೆ. ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ಸಲ್ಲಿಸುವ ಆತಂಕವೂ ಡಿ ಬಾಸ್ ಗ್ಯಾಂಗ್ ಗೆ ಇದೆ.