(Recharge Plans) ಜಿಯೋ ಮತ್ತು ಏರ್ಟೆಲ್ ನಲ್ಲಿ ಹೆಚ್ಚಿನ ಬೆಲೆಗೆ ರಿಚಾರ್ಜ್ ಮಾಡಿಸಿ ಸಾಕಾಗಿದ್ದರೆ, ನಿಮಗೆ ಉತ್ತಮ ಬೆಲೆಯಲ್ಲಿ ಹೆಚ್ಚಿನ ಬೆನಿಫಿಟ್ ಸಿಗುವ ಬಿಎಸ್ಎನ್ಎಲ್ (BSNL) ಕಂಪನಿಯ ಅತ್ಯುತ್ತಮ ರಿಚಾರ್ಜ್ ಪ್ಲಾನ್ಸ್ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಿದ್ದೇವೆ.
ನಿಮಗೆ ಗೊತ್ತಿರುವ ಹಾಗೆ ಕಳೆದ ತಿಂಗಳಿನಿಂದ ಜಿಯೋ ಮತ್ತು ಏರ್ಟೆಲ್ ರಿಚಾರ್ಜ್ ಪ್ಲಾನ್ಸ್ ಗಳಲ್ಲಿ ಭರ್ಜರಿ ಏರಿಕೆ ಮಾಡಿದ್ದು, ಗ್ರಾಹಕರ ಕೈಗೆ ಬರೆ ಇಟ್ಟಂತಾಗಿದೆ. ಈ ಕಂಪನಿಗಳಿಗೆ ಟಕ್ಕರ್ ಕೊಡಲು BSNL ಕಂಪನಿಯು ರಿಯಾಯಿತಿ ದರದಲ್ಲಿ ರಿಚಾರ್ಜ್ ಪ್ಲಾನ್ಸ್ ಗಳನ್ನು ಮಾರುಕಟ್ಟೆಯಲ್ಲಿ ಜಾರಿಗೊಳಿಸಿದೆ. ಈ ರಿಚಾರ್ಜ್ ಪ್ಲಾನ್, ಪ್ರಿಪೇಡ್ ರಿಚಾರ್ಜ್ ಪ್ಲಾನ್ (Prepaid) ಆಗಿದ್ದು, ಕೇವಲ ತಿಂಗಳಿಗೆ ರೂ.229 ನಲ್ಲಿ 30 ದಿನಗಳ ವ್ಯಾಲಿಡಿಟಿ ಹೊಂದಿದ್ದು ಯಾವುದೇ ನೆಟ್ವರ್ಕಗೆ ಉಚಿತ ಕರೆಯನ್ನು ಮಾಡಬಹುದಾಗಿದೆ.
ಬಿಎಸ್ಎನ್ಎಲ್ ಕಂಪನಿಯ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಸೌಲಭ್ಯಗಳು :
229 ರೂಪಾಯಿ ಬೆಲೆಯುಳ್ಳ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ ಕರೆಗಳನ್ನು (Unlimited local calls ) ಉಚಿತವಾಗಿ ನೀಡುತ್ತಿದೆ. ಇದರ ಜೊತೆಗೆ ಹೆಚ್ಚಿನ ಇಂಟರ್ನೆಟ್ ಡಾಟಾ ಸೌಲಭ್ಯಗಳು ಕೂಡ ಇದರಲ್ಲಿ ಲಭ್ಯವಿದ್ದು, ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು 60gb ಡೇಟಾ ಪಡೆಯಬಹುದು. ಅಂದರೆ ಒಂದು ದಿನಕ್ಕೆ 2ಜಿಬಿ ಡಾಟಾವು ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಸಿಗುತ್ತದೆ. ಇಷ್ಟೇ ಅಲ್ಲದೆ ನೀವು ಪ್ರತಿದಿನಕ್ಕೆ ನೂರು ಎಸ್ಎಂಎಸ್ ಗಳನ್ನು ಉಚಿತವಾಗಿ ಮಾಡಬಹುದು.
BSNL ಸಿಮ್ ಪಡೆಯುವುದು ಹೇಗೆ?
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಕಂಪನಿಯ ಸಿಮ್ ಗಳ ಪ್ರಸಿದ್ಧತೆ ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಸಿಮ್ ಗಳ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ. ನೀವು ಬಿಎಸ್ಎನ್ಎಲ್ ಸಿಮ್ ಅನ್ನು ಪಡೆಯಬೇಕಾದರೆ ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಕಂಪನಿಯ ಏಜೆಂಟರ ಭೇಟಿ ಮಾಡಿ ಅಥವಾ ಹತ್ತಿರದ ಬಿಎಸ್ಎನ್ಎಲ್ ಆಫೀಸ್ ಗೆ ಭೇಟಿ ನೀಡಿ ಪಡೆಯಬಹುದು.