ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಹಾದಿಬೀದಿಯಲ್ಲಿ ರೇಣುಕಾಚಾರ್ಯ ಪಕ್ಷದ ವಿರುದ್ಧ ಮಾತನಾಡಬಾರದು: ಬಿಜೆಪಿಯಿಂದ ಉಚ್ಚಾಟಿಸುವಂತೆ ವರಿಷ್ಠರಿಗೆ ಒತ್ತಾಯ

On: October 20, 2023 11:53 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-10-2023

ದಾವಣಗೆರೆ (Davanagere): ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಡಲಿ. ಪಕ್ಷದಲ್ಲಿ ಇರುವುದಾದರೆ‌ ಗೌರವಯುತವಾಗಿರಲಿ. ಇಲ್ಲವಾದಲ್ಲಿ ಗೌರವಯುತವಾಗಿ ಹೋಗಲಿ. ಮಾಧ್ಯಮಗಳ ಮುಂದೆ ಬಿಜೆಪಿ ಪಕ್ಷದ ಬಗ್ಗೆ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ವರಿಷ್ಠರು ಕೂಡಲೇ ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಗಂಡಗಾಳೆ ಒತ್ತಾಯಿಸಿದರು.

READ ALSO THIS STORY:

Channagiri: ಕಾಂಗ್ರೆಸ್ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡನ ರೋಷಾವೇಶ, ಕೆಲ್ಸ ಮಾಡದಿದ್ದರೆ ರಾಜೀನಾಮೆ ಕೊಡು, 5 ಸಾವಿರ ಮತ ಪಡೆ ನೋಡೋಣ: ಶಿವಗಂಗಾ ಬಸವರಾಜ್ ಗೆ ಹೊದಿಗೆರೆ ರಮೇಶ್ ಸವಾಲು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರವರು ಬಿಜೆಪಿ ಪಕ್ಷದಲ್ಲಿ ಹಲವಾರು ರೀತಿಯ ಅಧಿಕಾರ, ಅಂತಸ್ತನ್ನು ಅನುಭವಿಸಿ ಇದೀಗ‌ ತಾನು ಬೆಳೆದು ಬಂದ  ಪಕ್ಷದ ಬಗ್ಗೆ  ಮುಳುಗುವ ದೋಣಿ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ. ಕೂಡಲೇ ಪಕ್ಷದ ವರಿಷ್ಠರು ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಬಿ.ಜೆ.ಪಿ ಎಂದರೆ ಕಾರ್ಯಕರ್ತರು, ಕಾರ್ಯಕರ್ತರು ಎಂದರೆ ಬಿ.ಜೆ.ಪಿ ಎಂಬ ನಂಬಿಕೆ ಪ್ರತಿಯೊಬ್ಬ ಕಾರ್ಯಕರ್ತನಲ್ಲಿದೆ. ಆದರೆ ರೇಣುಕಾಚಾರ್ಯರ ಹೇಳಿಕೆಯಿಂದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ಮತ್ತು ಅಗೌರವ
ತೋರಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೇಣುಕಾಚಾರ್ಯರವರು ಮಾಜಿ ಸಿಎಂ .ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಾತನಾಡುತ್ತಾರೆ. ಬಿಎಸ್ ವೈ ಸಿಎಂ ಆಗಿದ್ದಾಗ ರೇಣುಕಾಚಾರ್ಯ, ಗುಂಪುಗಾರಿಕೆ ಮಾಡುತ್ತಾ ನೆಮ್ಮದಿಯಿಂದ ಅಧಿಕಾರ ಮಾಡಲು ಅವಕಾಶ ನೀಡದೆ ಮಂತ್ರಿಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಎಂಪಿಆರ್ ಸಚಿವರಾಗಿ, ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ಗೂಟದ ಕಾರು, ಸರ್ಕಾರಿ ಬಂಗಲೆ, ಅಧಿಕಾರ, ಅಂತಸ್ತು ಎಲ್ಲವನ್ನೂ ಅನುಭವಿಸಿದರು.  ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷ ಮುಳುಗುವ ದೋಣಿಯಾಗಿದೆ ಎಂದು ಹೇಳಿಕೆ ನೀಡಿರುವುದು ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗಿದೆ ಎಂದರು.

ಎಂ.ಪಿ.ರೇಣುಕಾಚಾರ್ಯರವರು ನಿಂತ ನೀರಿನಲ್ಲಿ ದೋಣಿಯನ್ನು ಚಲಾಯಿಸಿ ತಮ್ಮ ದೋಣಿಯನ್ನು ತಾವೇ ಮುಳುಗಿಸಿ ಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಶಿವಾನಂದ, ಎಸ್.ಟಿ. ಯೋಗೀಶ್ವರ್, ಜಿ.ಎಸ್ ಡಿ ಮೂರ್ತಿ, ಜಯಪ್ರಕಾಶ್, ಬಿ. ಟಿ. ಲೋಕೇಶ್ ಮತ್ತಿತರರು ಹಾಜರಿದ್ದರು.


ಜಾಹೀರಾತು: 

ವಧು – ವರ ಮಾಹಿತಿ ಕೇಂದ್ರ

ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220. 


 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment