ನವದೆಹಲಿ: ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ 29 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯೂ ಸೇರಿದಂತೆ ಪಕ್ಷವು ಇದುವರೆಗೆ 58 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಅದರಲ್ಲಿ 5 ಪಾಲಿಕೆ ಸದಸ್ಯರಿಗೆ ಟಿಕೆಟ್ ಸಿಕ್ಕಿದೆ.
ಬಿಜೆಪಿಯ ಹೊಸ ಪಟ್ಟಿಯನ್ನು ನೋಡೋದಾದ್ರೆ ಇಬ್ಬರು ಹಾಲಿ ಶಾಸಕರ ಟಿಕೆಟ್ ನಿರಾಕರಿಸಲಾಗಿದ್ದು, ಗಾಂಧಿನಗರ ಕ್ಷೇತ್ರದ ಅನಿಲ್ ವಾಜಪೇಯಿ ಮತ್ತು ಕರವಾಲ್ ನಗರದ ಮೋಹನ್ ಸಿಂಗ್ ಬಿಶ್ತ್ ಅವರಿಗೆ ಟಿಕೆಟ್ ಮಿಸ್ ಆಗಿದೆ. ಅದೇ ರೀತಿ ದೆಹಲಿಯ ಇಬ್ಬರು ಮಾಜಿ ಸಿಎಂಗಳ ಪುತ್ರರಾದ ಪ್ರವೇಶ್ ವರ್ಮಾ ಮತ್ತು ಹರೀಶ್ ಖುರಾನಾ ಅವರನ್ನು ಕೂಡ ಬಿಜೆಪಿ ಕಣಕ್ಕಿಳಿಸಿದೆ.
ಶಾಲಿಮಾರ್ ಬಾಗ್ನಿಂದ ರೇಖಾ ಗುಪ್ತಾ, ನಂಗ್ಲೋಯ್ ಜಾಟ್ನಿಂದ ಮನೋಜ್ ಶೌಕೀನ್, ಪವನ್ ಶರ್ಮಾ ಮತ್ತು ಕರಮ್ ಸಿಂಗ್ ಕರ್ಮಾ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಹಲವು ಹಳೆಯ ಅಭ್ಯರ್ಥಿಗಳಿಗೆ ಪಕ್ಷವು ಮತ್ತೆ ಟಿಕೆಟ್ ನೀಡಿದೆ. ಬಿಜೆಪಿ ನಜಾಫ್ಗಢದಿಂದ ನೀಲಂ ಪೆಹಲ್ವಾನ್ ಅವರನ್ನು ಕಣಕ್ಕಿಳಿಸಿದೆ. ಕಲ್ಕಾಜಿಯಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಬಿಜೆಪಿ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಕಣಕ್ಕಿಳಿಸಿತು ಮತ್ತು ಎಎಪಿ ಮೌಲ್ಯಗಳು ಮತ್ತು ತತ್ವಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಕೈಲಾಶ್ ಗಹ್ಲೋಟ್ಗೆ ಟಿಕೆಟ್ ನೀಡಲಾಗಿದೆ.
ಕಟ್ಟರ್ ಹಿಂದುತ್ವ ರಾಜಕಾರಣಕ್ಕೆ ಹೆಸರಾದ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಕಪಿಲ್ ಮಿಶ್ರಾ ಅವರಿಗೆ ಪಕ್ಷವು ಕರವಾಲ್ ನಗರದಿಂದ ಟಿಕೆಟ್ ನೀಡಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಅವರನ್ನು ಮೋತಿ ನಗರ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.
ದೆಹಲಿ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯವರೆಗೆ ಬಿಜೆಪಿ 58 ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಬಿಜೆಪಿ ಅಭ್ಯರ್ಥಿಗಳ ಜಾತಿ ಸಮೀಕರಣವನ್ನು ನೋಡಿದರೆ, 9 ಜಾಟರು ಮತ್ತು 8 ಬ್ರಾಹ್ಮಣರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅದೇ ರೀತಿ, 3 ಗುರ್ಜಾರ್ ಮತ್ತು 7 ಪಂಜಾಬಿಗಳಿಗೆ ಟಿಕೆಟ್ ನೀಡಲಾಗಿದ್ದು, ಈ ಪೈಕಿ 2 ಸಿಖ್ಖರು, 7 ಬನಿಯಾ ಸಮುದಾಯದವರು ಇದ್ದಾರೆ. ಬಿಜೆಪಿಯ ಎರಡನೇ ಪಟ್ಟಿಯಲ್ಲೂ 5 ಮಹಿಳೆಯರಿದ್ದಾರೆ. ಹಾಗೆ ನೋಡಿದರೆ ಪಕ್ಷ ಎಲ್ಲ ಸಮುದಾಯಗಳನ್ನು ಓಲೈಸುವ ಪ್ರಯತ್ನ ಮಾಡಿದೆ.