SUDDIKSHANA KANNADA NEWS/ DAVANAGERE/ DATE:09-03-2025
ಬೆಂಗಳೂರು: ಧಾರವಾಡದ ಕಾಂಗ್ರೆಸ್ ನ ಮುಖಂಡ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಆಪ್ತ ಮೊಹನ ಹಿರೇಮನಿ, ಲಕ್ಷ್ಮಣಿ ದೊಡ್ಡಮನಿ, ಸೋಮಪ್ಪ ಕಮ್ಮಾರ ಅವರು ವಕೀಲೆ ಸ್ವರ್ಣಲತಾ ಗದಿಗೆಪ್ಪಗೌಡರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದು ಕಾಂಗ್ರೆಸ್ ಮಹಿಳೆಯರ ಮೇಲೆ ತೋರುವ ಕಾಳಜಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿ ತಿಳಿಸಿದೆ.