ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಡ್ಯಾಂ ನೀರಿನ ಮಟ್ಟ ಕುಸಿತ: 182.11 ಅಡಿಗೆ ಕುಸಿತ, ಒಳಹರಿವು 7918 ಕ್ಯೂಸೆಕ್

On: September 1, 2024 9:24 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-09-2024

ದಾವಣಗೆರೆ:ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 182.11 ಅಡಿಗೆ ಕುಸಿತ ಕಂಡಿದೆ.

ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕುಂಠಿತವಾಗಿದ್ದು, ಹೊರ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ನೀರು ಸಂಗ್ರಹವಾಗಿದ್ದು, ಶನಿವಾರ 183 ಅಡಿ ತಲುಪಿದ್ದ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ.

ರಿವರ್ ಬೆಡ್ ಅಂತೇಳಿ 1625 ಕ್ಯೂಸೆಕ್ ತೋರಿಸಲಾಗಿದ್ದು, ಭದ್ರಾ ಎಡದಂಡೆ ನಾಲೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ 7918 ಕ್ಯೂಸೆಕ್ ಒಳಹರಿವಿದ್ದರೆ, 5569 ಕ್ಯೂಸೆಕ್ ಹೊರ ಹರಿವಿದೆ.

ಶನಿವಾರ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 182.9 ಅಡಿ ಇತ್ತು. 11253 ಕ್ಯೂಸೆಕ್ ಒಳಹರಿವಿದ್ದು, ನೀರಿನ ಮಟ್ಟ 9.45ರ ಸುಮಾರಿಗೆ 183 ಅಡಿ ತಲುಪಿತ್ತು. ಜಲಾಶಯದಿಂದ ಹೊರ ಹರಿವು 4193 ಕ್ಯೂಸೆಕ್ ಇತ್ತು.

ಜಲಾಶಯದ ನೀರಿನ ಮಟ್ಟ ಶುಕ್ರವಾರ 182.3 ಅಡಿಗೆ ಏರಿಕೆಯಾಗಿದ್ದು, 12137 ಕ್ಯೂಸೆಕ್ ಒಳಹರಿವಿತ್ತು. ಇದರಿಂದಾಗಿ ಡ್ಯಾಂನ ನೀರಿನ ಮಟ್ಟ ಹೆಚ್ಚಳವಾಗಿದೆ. ಜಲಾಶಯದಿಂದ 3943 ಕ್ಯೂಸೆಕ್ ಹೊರ ಹರಿವಿತ್ತು. ಆದ್ರೆ, ಇಂದು 4193 ಕ್ಯೂಸೆಕ್ ಇದೆ. ಜಲಾಶಯಕ್ಕೆ 8 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾಗುತ್ತಿದೆ. ಇದು ರೈತರಲ್ಲಿ ಖುಷಿಗೆ ಕಾರಣವಾಗಿದೆ.

ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ163. 11 ಅಡಿ ನೀರು ಸಂಗ್ರಹವಾಗಿತ್ತು. ಹೊರ ಹರಿವು 606 ಕ್ಯೂಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 19 ಅಡಿಗೂ ನೀರು ಹೆಚ್ಚು ಸಂಗ್ರಹವಾಗಿದೆ.

ಭದ್ರಾ ಡ್ಯಾಂ ನೀರಿನ ಮಟ್ಟ

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ: 01-09-2024

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 182.11 ಅಡಿ

ಕೆಪಾಸಿಟಿ: 67.701 ಟಿಎಂಸಿ

ಒಳಹರಿವು: 7918 ಕ್ಯೂಸೆಕ್

ಹೊರ ಹರಿವು: 5569 ಕ್ಯೂಸೆಕ್

ಭದ್ರಾ ಎಡದಂಡೆ ನಾಲೆ: 2650 ಕ್ಯೂಸೆಕ್

ಭದ್ರಾ ಬಲದಂಡೆ ನಾಲೆ: 380 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 163.11 ಅಡಿ

ಕಳೆದ ವರ್ಷ ಇದೇ ದಿನ ಒಳಹರಿವು: 606 ಕ್ಯೂಸೆಕ್

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment