ಬೆಂಗಳೂರು : ಇನ್ಮುಂದೆ ನೀವು ಆಸ್ತಿ ನೋಂದಣಿಯನ್ನು ಎಲ್ಲಿಯಾದರೂ ಮಾಡಬಹುದು, ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ.
ವ್ಯಕ್ತಿ ತನ್ನ ಜಿಲ್ಲಾ ವ್ಯಾಪ್ತಿಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆಯೇ ಎನಿವೇರ್ ರಿಜಿಸ್ಟ್ರೇಷನ್ .
ಸಬ್ ರಿಜಿಸ್ಟ್ರಾರ್ ಕಚೇರಿಯೆದುರು ಜನರು ಕಾಯುವುದರಿಂದ ಮುಕ್ತಿ ನೀಡಲು ಹಾಗೂ ಕಚೇರಿ ಸಿಬ್ಬಂದಿ ಮೇಲೆ ಕೆಲಸದೊತ್ತಡ ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಸೆ.2 ರಿಂದ ಜಾರಿಯಾಗುತ್ತಿದೆ.
ಜನರು ತಮ್ಮ ಜಿಲ್ಲೆಯೊಳಗೆ ಯಾವುದೇ ನೋಂದಣಿ ಕಾರ್ಯಕ್ಕಾಗಿ ತಮ್ಮ ಆಯ್ಕೆಯ ಸಬ್-ರಿಜಿಸ್ಟ್ರಾರ್ ಕಚೇರಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಪ್ರಸ್ತುತ, ಬೆಂಗಳೂರಿನಲ್ಲಿ ಹೊರತುಪಡಿಸಿ, ಆಸ್ತಿ ಮಾರಾಟಗಾರರು/ಖರೀದಿದಾರರು ನ್ಯಾಯವ್ಯಾಪ್ತಿಯ ಉಪ-ನೋಂದಣಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ, ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ.”ರಾಜ್ಯದಲ್ಲಿರುವ 257 ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಕೇವಲ 50 ಕಛೇರಿಗಳಲ್ಲಿ ವಿಪರೀತ ರಶ್ ಮತ್ತು ಸಿಬ್ಬಂದಿ ಕೆಲಸದ ಹೊರೆಯಿಂದಾಗಿ ಒತ್ತಡದಲ್ಲಿದ್ದಾರೆ. ಜನರು ತಮ್ಮ ಸರದಿಯನ್ನು ಕಾಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ . ಈ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.