ಬೇಕಾಗುವ ಪದಾರ್ಥಗಳು…
- ಬಾದಾಮಿ- 1 ಹಿಡಿ
- ಹಸಿ ಮೆಣಸಿನ ಕಾಯಿ- 2
- ಎಣ್ಣೆ-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ನಿಂಬೆ ರಸ- 1 ಚಮಚ
- ಒಗ್ಗರಣೆಗೆ- ಸಾಸಿವೆ, ಕರಿಬೇವು ಸ್ವಲ್ಪಮಾಡುವ ವಿಧಾನ…
ಬಾದಾಮಿಯನ್ನು ಕೆಲ ಗಂಟೆಗಳ ಕಾಲ ನೆನೆಸಿ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಸ್ವಲ್ಪ ಎಣ್ಣೆ ಹಾಕಿ ಹಸಿ ಮೆಣಸಿನ ಕಾಯಿಯನ್ನು ಹುರಿದು ಜಾರಿಗೆ ವರ್ಗಾಯಿಸಿ.
ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ. ಬಳಿಕ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಕರವಾದ ಬಾದಾಮಿ ಚಟ್ನಿ ಸವಿಯಲು ಸಿದ್ಧ.