SUDDIKSHANA KANNADA NEWS/ DAVANAGERE/ DATE:21-02-2024
ದಾವಣಗೆರೆ: ಬಿ.ಎಸ್.ಎನ್.ಎಲ್. ತಾಮ್ರದ ಮಾಧ್ಯಮದಿಂದ ಫೈಬರ್ಗೆ ಪರಿವರ್ತನೆ ಮಾಡಲಾಗುತ್ತಿದೆ.
ಸರ್ಕಾರದ ಆದೇಶದೊಂದಿಗೆ, ಸರ್ಕಾರಿ ಕಂಪನಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು, ಸಾರ್ವಜನಿಕರಿಗೆ ಆಯ್ಕೆ ಮಾಡಲು, ಟೆಲಿಕಾಂ ವಲಯದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ನಿರ್ವಹಿಸಲು ಮತ್ತು ಏಕಸ್ವಾಮ್ಯದ ಶಕ್ತಿಗಳನ್ನು ದೂರವಿರಿಸಲು. ಆತ್ಮನಿರ್ಭರ ಭಾರತ ಮಿಷನ್ ಅಡಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳಿಂದ ಚಾಲಿತವಾಗಿರುವ 4ಜಿ/5ಜಿ ತಂತ್ರಜ್ಞಾನದ ಪ್ರಸರಣ ವ್ಯವಸ್ಥೆಯನ್ನು ಬಳಸಿಕೊಂಡು ಈ ಸೇವೆ ನೀಡಲಾಗುತ್ತಿದೆ.
ನಮ್ಮ ಗ್ರಾಹಕರಿಗೆ ಉತ್ತಮ ಟೆಲಿಕಾಂ ಕವರೇಜ್ ಮತ್ತು ಅಡೆತಡೆಯಿಲ್ಲದ ಸುಧಾರಿತ ಮೊಬೈಲ್ ಸೇವೆಗಳನ್ನು ಒದಗಿಸುವ ಹಿತದೃಷ್ಠಯಿಂದ ಬಿ.ಎಸ್.ಎನ್.ಎಲ್. ನೆಟ್ವರ್ಕ್ನಲ್ಲಿ ಗಣನೀಯ ಸುಧಾರಣೆ ತರಲು ಮತ್ತು ಆಸ್ತಿತ್ವದಲ್ಲಿರುವ ವೈರ್ಲೈನ್ ಸಂಪರ್ಕಗಳನ್ನು ತಾಮ್ರದ ಮಾಧ್ಯಮದಿಂದ ಫೈಬರ್ ಮಾಧ್ಯಮದ ಮೂಲಕ ಎಫ್.ಟಿ.ಟಿ. ಗೆ ಪರಿವರ್ತಿಸುವುದಕ್ಕೆ ಸೇರಿದಂತೆ ಉನ್ನತ-ದರ್ಜೆಯ ಕೆಲಸವನ್ನು ಮಾಡಲಾಗುತ್ತಿದೆ ಎಂದು ದಾವಣಗೆರೆ ಬಿ.ಎಸ್.ಎನ್.ಎಲ್ ಪ್ರಕಟಣೆ ತಿಳಿಸಿದೆ.