SUDDIKSHANA KANNADA NEWS/ DAVANAGERE/ DATE:22-01-2025
ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮ ಗಮನ ಸೆಳೆಯಿತು.
ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಿನ್ನದ ಪದಕ : ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ 793 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ 176 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆದುಕೊಂಡರು.
28 ಎಂ.ಎಸ್ಸಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು ಅವರಿಗೆ ಒಟ್ಟು 33 ಚಿನ್ನದ ಪದಕಗಳನ್ನು ನೀಡಲಾಯಿತು. 10 ಪಿ.ಹೆಚ್.ಡಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು, ಅವರಿಗೆ ಒಟ್ಟು 12 ಚಿನ್ನದ ಪದಕಗಳನ್ನು ನೀಡಲಾಯಿತು.
ಪದವಿ ಚಿನ್ನದ ಪದಕ ವಿಜೇತರು(2025) ; ಸಂಜೀತಾ ಎನ್ ಎಸ್ 4 ಪದಕ. ಪ್ರತೀಕ್ಷಾ ಎಲ್ ನಾಯ್ಕ 2 ಚಿನ್ನದ ಪದಕ. ಮೋಹನ್ ಪ್ರಸಾದ್ ಜಿ 1, ಚಂದನ ಆರ್ 1, ಅರವಿಂದ ಹೆಚ್ ಆರ್ 1, ಯಶಸ್ವಿನಿ ಎಂ.ಬಿ 1, ಸುಪ್ರಿತ ಎಂ.ಎA. 1, ಅಭಿಜ್ಞಾ ನಾಯಕ್ 1 ಒಟ್ಟು 25 ಚಿನ್ನದ ಪದಕ.
ಸ್ನಾತಕ ಪದವಿ ಚಿನ್ನದ ಪದಕ ವಿಜೇತರು: ಲಹರಿ 2, ಸಚಿನ್ ಎಲ್ ಎಂ, ಲೇಖನ ತಲಾ 2 ಮತ್ತು ಅಭಿಷೇಕ್ ಜೆ.ಕೆ, ಕಮಲಶ್ರೀ ಎಸ್ ಡಿ , ಚಂದನ ಎಸ್, ನಂದಿತಾ ಸಿನ್ಹಾ, ಮಂಜುಶ್ರೀ ಬಿ ಯು, ಅಲೇಕ್ಯ ಬಿ.ಎಂ, ಅನಿಲ್.ಹೆಚ್.ಎಂ., ಜ್ಯೋತಿ ಈ ತೊಂಡಿ, ಸಿಂಚನ, ಮಾಧರ್ಯ ಗೌಡ, ಸಲ್ಮಾ, ಸ್ವಾತಿ ಬಿ ತಲಾ 1 ಪದಕ ಒಟ್ಟು 18 ಚಿನ್ನದ ಪದಕ ಪಡೆದು ಕೊಂಡರು.
ಪಿಹೆಚ್ ಡಿ ಚಿನ್ನದ ಪದಕವಿಜೇತರು: ದರ್ಶನ್ ಆರ್ 2, ವಿಶಾಲ ರೆಡ್ಡಿ, ಸುಪ್ರಿಯ ಕುಮಾರಸ್ವಾಮಿ ಸಾಲಿಮಠ, ರವಿಚಂದ್ರ, ರೇಷ್ಮಾ ಕೆ ತಲಾ 1 ಪದಕ ಒಟ್ಟು 6 ಚಿನ್ನದ ಪದಕ ಪಡೆದಿರುತ್ತಾರೆ.
ಡಾಕ್ಟರೇಟ್ ಗೌರವ ಪ್ರದಾನ :
ಕೃಷಿಕರು, ಕೃಷಿ ವ್ಯವಸ್ಥೆಗೆ ಬೆಂಬಲವಾಗಿದ್ದ ಹಾಗೂ ಸಮಾಜವಾದಿ ಚಿಂತಕರಾದ ಶ್ರೀಯುತ ಕಾಗೋಡು ತಿಮ್ಮಪ್ಪನವರು ಇವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವಿಸಲು ಅವರಿಗೆ ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.