SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದು, ಪೊಲೀಸ್ ಇಲಾಖೆಯು ಅಭಿನಂದಿಸಿದೆ.
ಕಳೆದ 15ರಂದು ದಾವಣಗೆರೆ ನಗರದಲ್ಲಿ ಆಟೋದಲ್ಲಿ ಪ್ರಯಾಣಿಕರೋಬ್ಬರು ತಮ್ಮ ಬ್ಯಾಗ್ ಅನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು. ಈ ಬ್ಯಾಗ್ ಅನ್ನು ಆವರಗೆರೆಯ ಆಟೋ ಚಾಲಕ ಮಂಜುನಾಥ್ ಅವರು ಪ್ರಾಮಾಣಿಕತೆಯಿಂದ ಸ್ಥಳೀಯ ಪೊಲೀಸ್ ಠಾಣೆಯಾದ ಆಜಾದ್ ನಗರ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದಾರೆ.
ಈ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಬಟ್ಟೆ, ಇತರೆ ವಸ್ತುಗಳು ಹಾಗೂ ವಿವಿಧ ದಾಖಲೆಗಳು ಇದ್ದವು. ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಬ್ಯಾಗ್ ವಾರಾಸುದಾರ ಕಕ್ಕರಗೊಳ್ಳದ ಸುನೀಲ್ ಅವರನ್ನು ಠಾಣೆಗೆ ಕರೆಯಿಸಿ ಆಟೋ ಚಾಲಕರ ಉಪಸ್ಥಿತಿಯಲ್ಲಿ ಬ್ಯಾಗ್ ಅನ್ನು ಹಸ್ತಾಂತರಿಸಿದರು.
ಈ ವೇಳೆ ಪಿಎಸ್ಐಗಳಾದ ಇಮ್ತಿಯಾಜ್, ಮಹಮ್ಮದ್ ಅಲ್ತಾಫ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಟೋ ಚಾಲಕರಾದ ಮಂಜುನಾಥ್ ಅವರ ಪ್ರಾಮಾಣಿಕತೆ ಶ್ಲಾಘಿಸಿ, ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಲಾಯಿತು.






