SUDDIKSHANA KANNADA NEWS/ DAVANAGERE/ DATE:20-10-2023
ಬೆಂಗಳೂರು (Bangalore): ಎರಡೂವರೆ ವರ್ಷ ಆದ ಮೇಲೆ ಸಿಎಂ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುತ್ತಾರೆ. ಈ ಅವಧಿಗೆ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ. ಎಲ್ಲಾ ಸಚಿವರಿಗೂ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
READ ALSO THIS STORY:
Bangalore: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಕಲೆಕ್ಷನ್ ಮಾಸ್ಟರ್ಸ್, ರಾಜ್ಯದ ಹಣ ಲೂಟಿ ಮಾಡಿ ಹೈಕಮಾಂಡ್ ಗೆ ಸಂದಾಯ: ಬಿಜೆಪಿ ಟ್ವೀಟ್ ನಲ್ಲಿ ಆರೋಪ
ಬೆಂಗಳೂರಿನಲ್ಲಿ ಈ ಬಾಂಬ್ ಸಿಡಿಸಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಎಲ್ಲಾ ಸಚಿವರಿಗೂ ಸೂಚನೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. 135 ಶಾಸಕರಿದ್ದೇವೆ. ಎಲ್ಲರಿಗೂ ಅಧಿಕಾರ ಸಿಗಬೇಕು. ಸುರ್ಜೇವಾಲಾ ಅವರು ಎರಡೂವರೆ ವರ್ಷ ಮೊದಲ ಅವಧಿಗೆ ಸಚಿವರಾಗಿರುತ್ತಾರೆ. ಆ ಬಳಿಕ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡುವಂತೆ ಸೂಚನೆ ಕೊಡಲಾಗಿದೆ. ವರಿಷ್ಠರು ಈ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರ ಸಿಎಂ ಆಗಿರುತ್ತಾರೆ. ಆ ನಂತರ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನೂ ಹೈಕಮಾಂಡ್ ಬದಲಾವಣೆ ಮಾಡಲಿದೆ ಎಂದು ಅಶೋಕ್ ಪಟ್ಟಣ್ ಮಾಹಿತಿ ನೀಡಿದ್ದಾರೆ.