SUDDIKSHANA KANNADA NEWS/ DAVANAGERE/ DATE:26-10-2023
ದಾವಣಗೆರೆ: ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮವು ನಿರುದ್ಯೋಗಿ ಬಂಜಾರ ಮಹಿಳೆಯರಿಗೆ ಸಾಂಪ್ರದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕಾರ್ಯಕ್ರಮದ ಹಮ್ಮಿಕೊಂಡಿದ್ದು, ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಬಂಜಾರ ಕಸೂತಿ ಕಲೆ ಮತ್ತು ಪೂರಕ ಹೊಲಿಗೆ ತರಬೇತಿ ನೀಡಲು ಅರ್ಹ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಈ ಕಾರ್ಯಕ್ರಮ ಅನಷ್ಟಾನಗೊಳಿಸಲಾಗುವುದು. ಆದ್ದರಿಂದ ಬಂಜಾರ ಮಹಿಳೆಯರಿಗೆ ಸಾಂಪ್ರದಾಯಿಕ ಕಸೂತಿ ಮತ್ತು ಹೊಲಿಗ
ತರಬೇತಿ ನೀಡಲು ಇಚ್ಚಿಸುವ ಸಂಸ್ಥೆಯವರು ದಿ: 31-10-2023 ರೊಳಗೆ ಜಿಲ್ಲಾ ಬಂಜಾರ ಭವನ, ಆಂಜನೇಯ ಮಹಾದ್ವಾರ, ಓಂ ನಗರ, 1ನೇ ಮುಖ್ಯ ರಸ್ತೆ, ಬಂಜಾರ ಭವನ ಕಟ್ಟಡ, ನವುಲೆ, ಶಿವಮೊಗ್ಗ ಜಿಲ್ಲೆ, ಮೊ.ಸಂ: 990137335 ಈ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ತಾಂಡಾ ಅಭಿವೃದಿ ನಿಗಮದ ಅಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.