SUDDIKSHANA KANNADA NEWS/ DAVANAGERE/ DATE:21-03-2025
ಶಿವಮೊಗ್ಗ: ಯೋಗ (Yoga) ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ 2025 ನೇ ಸಾಲಿನ ಪ್ರಧಾನ ಮಂತ್ರಿಗಳ ಯೋಗ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
Read Also This Story: ಹನಿ ಟ್ರ್ಯಾಪ್ BIGUPDATE: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
ಅರ್ಹ ಅಭ್ಯರ್ಥಿಗಳು ಮಾ.31 ರ ಒಳಗೆ https:// nnovateindia.mygov./in/pm-yoga-awards-2025 ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ ಯೋಗ ಸಂಸ್ಥೆಗಳಿಗೆ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಯೋಗ ಕ್ರೀಡಾಪಟುಗಳು ಹಾಗೂ ಯೋಗ ಸಂಸ್ಥೆಗಳು ರಾಷ್ಟ್ರೀಯ ಮಟ್ಟ ಅಥವಾ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.