SUDDIKSHANA KANNADA NEWS/ DAVANAGERE/ DATE-03-06-2025
ದಾವಣಗೆರೆ: ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ 2022ರ ಮಾರ್ಗಸೂಚಿಯಡಿ ಬಾಲಕ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ 2025-26ನೇ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ ಅಥವಾ ಯೋಗ, ಸಂಗೀತ, ಕ್ರಾಫ್ಟ್, ಮತ್ತು ಪಾಠ ಹೇಳುವ ಅರೆಕಾಲಿಕ ಶಿಕ್ಷಕರ ಸೇವೆಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ವಿವರ:
ವಿಜ್ಞಾನ, ಗಣಿತ ಮತ್ತು ಪಾಠ ಹೇಳುವ ಅರೆಕಾಲಿಕ ಶಿಕ್ಷಕರ ವಿಷಯದಲ್ಲಿ ತಲಾ 2 ಹುದ್ದೆಗಳಿದ್ದು, ಬಿಎಸ್ಸಿ, ಬಿಎಡ್ ಮತ್ತು ದೈಹಿಕ, ಯೋಗ ವಿಷಯದಲ್ಲಿ 2 ಹುದ್ದೆಗಳಿಗೆ ಸಿಪಿಎಡ್, ಬಿಪಿಎಡ್ ವಿದ್ಯಾರ್ಹತೆ ಹೊಂದಿರಬೇಕು.
ಸಂಗೀತ, ಕ್ರಾಫ್ಟ್ ವಿಷಯದಲ್ಲಿ ಡಿಪ್ಲೋಮ, ಸಂಗೀತ, ಕ್ರಾಫ್ಟ್ ಮತ್ತು ಕಲೆಯಲ್ಲಿ ಪದವಿ ಪಡೆದಿರಬೇಕು. ಅಲ್ಲದೆ ಈ ಮೇಲ್ಕಂಡ ಹುದ್ದೆಗಳಿಗೆ 1 ವರ್ಷದ ಅನುಭವದೊಂದಿಗೆ 25 ರಿಂದ 55 ವರ್ಷದ ವಯೋಮಾನದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಬಾಲಕಿಯರ ಸರ್ಕಾರಿ ಬಾಲ ಮಂದಿರ ಸಂಸ್ಥೆಗಳಿಗೆ ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಗಳು ಇದೇ ಜೂನ್ 20ರ ಸಂಜೆ 5.30ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅಪೂರ್ಣ ಮತ್ತು ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.