SUDDIKSHANA KANNADA NEWS/ DAVANAGERE/ DATE:31-01-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಖಾಲಿ ಇರುವ (59 ಪುರುಷ + 10 ಮಹಿಳೆ) ಒಟ್ಟು 69 ಸ್ವಯಂ ಸೇವಾ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
19 ರಿಂದ 45 ವರ್ಷ ವಯೋಮಾನದೊಳಗಿನವರಾಗಿಬೇಕು. 10 ನೇ ತರಗತಿ ಪಾಸಾಗಿರುವ, ಆರೋಗ್ಯವಂತ ಉತ್ತಮ ದೈಹಿಕ ಸಾಮಥ್ರ್ಯ ಹೊಂದಿದವರು, ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರಾಗಿರಬಾರದು.
ಕಾನೂನು ಮೊಕದ್ದಮೆಗಳಲ್ಲದವರು ಹಾಗೂ ಸಂಬಂಧಪಟ್ಟ ಘಟಕಗಳಿಂದ 6 ಕಿ.ಮೀ ವ್ಯಾಪ್ತಿಯೊಳಗಿನ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಾವಣಗೆರೆ ಘಟಕದಲ್ಲಿ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳ ವಿವರ: ಹರಿಹರ-3, ಮಲೇಬೆನ್ನೂರು-7, ಹೊನ್ನಾಳಿ-4, ನ್ಯಾಮತಿ-15, ಚನ್ನಗಿರಿ-3, ಸಂತೇಬೆನ್ನೂರು-4, ಜಗಳೂರು-8,ಬಿಳಿಚೋಡು-11, ಬಸವನಕೋಟೆ-4 ಸ್ಥಾನಗಳು ಖಾಲಿ ಇರುತ್ತವೆ.
ಫೆ.9 ರಿಂದ ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಫೆ.12 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾದೇಷ್ಟರ ಕಚೇರಿ, ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್, ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ-577006 ದೂ.ಸಂ: 08192-250784 ಸಂಪರ್ಕಿಸಬಹುದಾಗಿದೆ.