SUDDIKSHANA KANNADA NEWS/ DAVANAGERE/ DATE:21-10-2024
ದಾವಣಗೆರೆ: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೋಸ್ಕರ ಕರ್ನಾಟಕ ಮುಕ್ತ ವಿದ್ಯಾಲಯ, (ಕೆಓಎಸ್) ಹಾಗೂ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಪನ್ ಸ್ಕೂಲ್(ಎನ್ಐಓಎಸ್) ಇವರ ವತಿಯಿಂದ 2025ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ನೇರ ಪರೀಕ್ಷೆ ಕಟ್ಟಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಶಿಕ್ಷಣದಿಂದ ವಂಚಿತರಾಗಿರುವ ಮತ್ತು ಅರ್ಧಕ್ಕೆ ಶಾಲೆ ಬಿಟ್ಟಿರುವ ಅಭ್ಯರ್ಥಿಗಳಿಗೋಸ್ಕರ ಎಸ್ಸೆಸ್ಸೆಲ್ಸಿ ನೇರ ಪರೀಕ್ಷೆ ಕಟ್ಟಲು ಅರ್ಜಿ ಆಹ್ವಾನಿಸಿದ್ದು, 7, 8 ಮತ್ತು 9 ನೇ ತರಗತಿಗಳಲ್ಲಿ ಓದಿ ಪಾಸಾದವರು ಅರ್ಧಕ್ಕೆ ಶಾಲೆ ಬಿಟ್ಟವರು ಮತ್ತು ಫೇಲಾದವರು ಹಾಗೂ ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫೇಲಾದವರು ಮತ್ತು 15 ವರ್ಷ ತುಂಬಿದವರು ಮತ್ತು ಕನ್ನಡ ಮತ್ತು ಇಂಗ್ಲೀಷ್ ವಿಷಯಗಳನ್ನು ಓದಲು, ಬರೆಯಲು ಬರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟಲು ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಹಾಗೂ 17 ವರ್ಷ ತುಂಬಿರಬೇಕು ಅಥವಾ ಈಗಾಗಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಅರ್ಧಕ್ಕೆ ಬಿಟ್ಟವರು ಹಾಗೂ ಫೇಲಾದವರು ಸಹ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಟ್ಟಲು ಅವಕಾಶ ಕಲ್ಪಿಸಿದ್ದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪ್ರವೇಶ ಪಡೆಯಬಹುದು. ಈ ಪರೀಕ್ಷೆಗಳಲ್ಲಿ ಪಾಸಾದವರು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು.
ಅನುಕಂಪದ ನೌಕರಿ ಪಡೆಯಬಹುದು. ಇಂಜಿನಿಯರಿಂಗ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಳ್ಳಬಹುದು ಹಾಗೂ ಮೆಡಿಕಲ್ ಕೋರ್ಸ್ಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆಯಬಹುದು ಹಾಗೂ ಡಿ.ಫಾರ್ಮಾ ಮತ್ತು ಬಿ.ಫಾರ್ಮಾ ಹಾಗೂ ರೆಗ್ಯುಲರ್ ಪದವಿ ಪಡೆಯಲು ನೇರವಾಗಿ ಕಾಲೇಜಿಗೆ ದಾಖಲಾತಿ ಪಡೆಯಬಹುದು ಮತ್ತು ಪಿಯುಸಿ ಅರ್ಹತೆಯ ಆಧಾರದ ಮೇಲೆ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಅಣಬೇರು ಶಿವಮೂರ್ತಿ, ಸ್ವಯಂ ನಿವೃತ್ತ ಶಿಕ್ಷಕರು ಹಾಗೂ ಸಮನ್ವಯಾಧಿಕಾರಿಗಳು, ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಪನ್ ಸ್ಕೂಲ್/ ಕನಕ ಕರೆಸ್ಪಾಂಡೆನ್ಸ್ ಕಾಲೇಜ್, ಕುರುಬರ ಹಾಸ್ಟೆಲ್ ಕಾಂಪ್ಲೆಕ್ಸ್, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ -577 002. ಮೊ.ನಂ. 70229 36433, 98866 78178 ಸಂಪರ್ಕಿಸ ಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲು ಅಣಬೇರು ಶಿವಮೂರ್ತಿ ತಿಳಿಸಿದ್ದಾರೆ.