SUDDIKSHANA KANNADA NEWS/ DAVANAGERE/ DATE:08-03-2025
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರು. ಇನ್ನು ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಬಂಡೆದ್ದಿರುವ ಭಿನ್ನರಿಗೆ ವಾರ್ನಿಂಗ್
ಕೊಟ್ಟು ಹೋಗಿದ್ದಾರೆ. ಯಾಕೆಂದರೆ ಅರವಿಂದ್ ಲಿಂಬಾವಳಿ ಕೊಟ್ಟ ಚೀಟಿ ಓದದ ಅಮಿತ್ ಶಾ ದೆಹಲಿಗೆ ಬರುವಂದೆ ಸಂದೇಶ ರವಾನಿಸಿದ್ದಾರೆ.
ಈ ಮೂಲಕ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಕೈ ಮೇಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಪದ್ಮವಿಭೂಷಣ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಸ್ಮರಣಾರ್ಥ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಯಡಿಯೂರಪ್ಪ ಮತ್ತು
ವಿಜಯೇಂದ್ರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಜನ ಬೇಸತ್ತಿದ್ದಾರೆ. ಬಿಜೆಪಿಯತ್ತ ವಾಲುವ ಈ ಸನ್ನಿವೇಶದಲ್ಲಿ ಕಚ್ಚಾಟ ನಡೆದ್ರೆ ಹೇಗೆ? ನಿಮ್ಮ ಕೈಯಲ್ಲಿ ಆದರೆ ಸರಿಮಾಡಿ. ಇಲ್ಲದಿದ್ದರೆ ನಾವೇ ನೋಡಿಕೊಳ್ಳುತ್ತೇವೆ. ಆಗ ಎಲ್ಲದಕ್ಕೂ ನೀವು ರೆಡಿಯಾಗಿರಬೇಕು ಎಂಬ ಸಂದೇಶ ಬಿಎಸ್ ವೈ ಅವರಿಗೆ ರವಾನಿಸಿದ್ದಾರೆ.
ಜೊತೆಗೆ ಭಿನ್ನರನ್ನು ನಾವು ನೋಡಿಕೊಳ್ಳುತ್ತೇವೆ. ಬಹಿರಂಗವಾಗಿ ನೀವು ಟೀಕಿಸಬೇಡಿ, ಪಕ್ಷದ ಡ್ಯಾಮೇಜ್ ಹಾಳು ಮಾಡಬೇಡಿ. ಸಂಘಟನೆಯತ್ತ ತೊಡಗಿಸಿಕೊಳ್ಳಿ ಎಂಬ ಮೆಸೇಜ್ ರವಾನಿಸಿ ಹೋಗಿದ್ದಾರೆ. ಇದರಿಂದಾಗಿ ಬಿಜೆಪಿ ಭಿನ್ನಮತೀಯರಲ್ಲಿ ನಡುಕ ಉಂಟಾಗಿರುವುದಂತೂ ಸತ್ಯ.