SUDDIKSHANA KANNADA NEWS/ DAVANAGERE/ DATE:17-08-2024
ದಾವಣಗೆರೆ: ಅಹಿಂದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಿ ಹಾಗೂ ಸಿಎಂ ತೇಜೋವಧೆಗೆ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ದಾವಣಗೆರೆಯಲ್ಲಿ ಅಹಿಂದ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಯದೇವ ಸರ್ಕಲ್ ನಲ್ಲಿ ಜಮಾಯಿಸಿದ ಅಹಿಂದ ವರ್ಗದ ಮುಖಂಡರುಗಳು, ಎಲ್ಲಾ ಶೋಷಿತ ಸಮುದಾಯದ ಕಾರ್ಯಕರ್ತರು, ಕುರುಬ ಸಮಾಜದ ಮುಖಂಡರು, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಜಯದೇವ ಸರ್ಕಲ್
ಮುಖಾಂತರ ಗಾಂಧಿ ವೃತದವರೆಗೆ ಸಾಗಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಇದಕ್ಕೂ ಮೊದಲು ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದಲ್ಲಿ ಸಭೆ ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಐದು ಗ್ಯಾರಂಟಿಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯರನ್ನು ಕೆಳಗಿಳಿಸುವ ಹುನ್ನಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂಥ ಕುತಂತ್ರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯರ ತೇಜೋವಧೆಗೆ ಮೊದಲಿನಿಂದಲೂ ಹುನ್ನಾರ ನಡೆಸಲಾಗುತಿತ್ತು. ಈಗ ರಾಜಭವನ ಬಳಕೆ ಮಾಡಿಕೊಂಡು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಸಲಾಗಿದೆ. ಇಂಥ ಧೋರಣೆ ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಕುರುಬ ಸಮಾಜದ ಮುಖಂಡರಾದ ಮಂಜುನಾಥ್ ಇಟ್ಟುಗುಡಿ, ಅನಂತನಾಯ್ಕ, ವಾಲ್ಮೀಕಿ ಸಮಾಜದ ಹೋದಿಗೆರೆ ರಮೇಶ್, ದಾವಣಗೆರೆ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ಮುಸ್ಲಿಂ ಸಮಾಜದ ಮುಖಂಡ ಅಯೂಬ್ ಖಾನ್, ಕತ್ತಲಗೆರೆ ತಿಪ್ಪಣ್ಣ, ಹೊನ್ನಾಳಿಯ ಎ. ಕೆ. ನಾಗಪ್ಪ, ಸಿದ್ದಪ್ಪ,ಜಿಲ್ಲಾ ಈಡಿಗ ಸಮಾಜದ ಏ ನಾಗರಾಜ್, ದಾವಣಗೆರೆ ಜಿಲ್ಲಾ ಕುರುಬ ಸಮಾಜದ ಮುಖಂಡ ಹೆಚ್. ಬಿ. ಪರಶುರಾಮಪ್ಪ, ಲಿಂಗರಾಜ್, ತಕಡಿ ಮಂಜುನಾಥ್, ದಾವಣಗೆರೆ ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದೀಪಕ್ ಜೋಗಪ್ಪನವರ್, ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ, ಎಸ್. ಎಸ್. ರವಿಕುಮಾರ್, ಬೀರೇಶ್ವರ ಭವನದ ಎಕ್ಕನಳ್ಳಿ ಆನಂದಪ್ಪ, ಉಪ್ಪಾರ್ ಸಮಾಜದ ಮುಖಂಡ ರಾಮಚಂದ್ರ, ಪೈಲ್ವಾನ್ ಸಂಗಪ್ಪ, ಕುರುಬ ಸಂಘ ಅಧ್ಯಕ್ಷ ಕುಂಬಳೂರು ವಿರುಪಾಕ್ಷಪ್ಪ, ದೀಟೂರು ಚಂದ್ರು, ಬಾಡದ ರವಿ, ವೈ. ಮಂಜುನಾಥ್, ರಮೇಶ್, ವಕೀಲರು ಬಿಕೆ ರವಿ ಚನ್ನಗಿರಿ, ಮಹಾನಗರ ಪಾಲಿಕೆ ಸದಸ್ಯ ಉದಯ್ ಕುಮಾರ್, ದಿನೇಶ್ ಕೆ ಶೆಟ್ಟಿ, ಶಾಮನೂರು ಅಂಜಿನಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಚೆಲುವಪ್ಪ, ಫುಟ್ಬಾಲ್ ಗಿರೀಶ್,,ಭೋವಿ ಸಮಾಜದ ಜಿಲ್ಲಾಧ್ಯಕ್ಷ ಜಯಪ್ಪ, ಸೇರಿದಂತೆ ಜಿಲ್ಲೆಯ ನೂರಾರು ಅಹಿಂದ ಮಹಿಳಾ ವರ್ಗದ ಮುಖಂಡರು ಪಾಲ್ಗೊಂಡಿದ್ದರು.