SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್. ಅಡಿಕೆ ಗುಣಮಟ್ಟವಾಗಿಲ್ಲವೆಂದರೆ ಅಡಿಕೆ ಖರೀದಿ ಮಾಡುವುದಿಲ್ಲ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ ಶಿವಮೊಗ್ಗ ಎಚ್ಚರಿಕೆ ನೀಡಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾನ್ ಮಸಲಾ ಮತ್ತು ಗುಟ್ಕಾ ಕಂಪೆನಿಗಳು ಅಡಿಕೆಯ ಗುಣಮಟ್ಟಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿವೆ. ಗುಣಮಟ್ಟವಿಲ್ಲದ ಅಡಿಕೆ ಖರೀದಿಯನ್ನು ನಿಲ್ಲಿಸಿರುತ್ತದೆ. ಈ ಕಾರಣದಿಂದಾಗಿ ಮಾಮ್ ಕೋಸ್ ಸಂಸ್ಥೆಯು ಸಹ ಉತ್ತಮ ಗುಣಮಟ್ಟದ ಅಡಿಕೆ ಖರೀದಿ ಬಗೆಗೆ ಗಮನ ಹರಿಸುವುದು ಅನಿವಾರ್ಯವಾಗಿರುತ್ತದೆ.
ಆದ್ದರಿಂದ ಸದಸ್ಯರು ಅಡಿಕೆಯ ಗುಣಮಟ್ಟಕ್ಕೆ ಹೆಚ್ಚಿನ ಅದ್ಯತೆ ನೀಡುವುದರಿಂದ ಅಡಿಕೆಗೆ ಹೆಚ್ಚಿನ ಧಾರಣೆ ಪಡೆಯಬಹುದಾಗಿದೆ. ಗೊರಬಲು ಪಾಲಿಷರ್‌ಗೆ ಹಾಕಿದ ಅಡಿಕೆಯನ್ನು ಮತ್ತು ಗುಣಮಟ್ಟವಿಲ್ಲದ ಎರಡನೇ ದರ್ಜೆಯ ಅಡಿಕೆಯನ್ನು ರಾಶಿ ಇಡಿಗೆ ಸೇರಿಸದೇ ಅದನ್ನು ಪ್ರತ್ಯೇಕವಾಗಿಯೇ ಸಂಘಕ್ಕೆ ತಂದು ಬಿಲ್ ಮಾಡಿಸುವುದರಿಂದ ರೈತರು ಅಡಿಕೆಗೆ ಉತ್ತಮ ದರ ಪಡೆಯಬಹುದಾಗಿರುತ್ತದೆ.
ಪ್ರಸಕ್ತ ಅನಿವಾರ್ಯ ಪರಿಸ್ಥಿತಿಯನ್ನು ಅರಿತುಕೊಂಡು ಸದಸ್ಯರು ಸಂಘಕ್ಕೆ ಉತ್ತಮ ಗುಣಮಟ್ಟದ ಅಡಿಕೆಯನ್ನು ನೀಡಿ ವ್ಯವಹರಿಸಿ ಸಹಕರಿಸಬೇಕಾಗಿ ಕೋರುತ್ತೇವೆ ಎಂದು ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ
ನೀಡಿದ್ದಾರೆ.