• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Wednesday, June 18, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಸಕಾಲದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸದ ಅಧಿಕಾರಿಗಳ ಮೇಲೆ ಕ್ರಮ: ರಹೀಂ ಖಾನ್ ಎಚ್ಚರಿಕೆ!

Editor by Editor
June 4, 2025
in ಬೆಂಗಳೂರು, ದಾವಣಗೆರೆ
0
ಸಕಾಲದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸದ ಅಧಿಕಾರಿಗಳ ಮೇಲೆ ಕ್ರಮ: ರಹೀಂ ಖಾನ್ ಎಚ್ಚರಿಕೆ!

SUDDIKSHANA KANNADA NEWS/ DAVANAGERE/ DATE-04-06-2025

ದಾವಣಗೆರೆ: ನಗರೋತ್ಥಾನದಡಿ ಮೂರನೇ ಹಂತ ಪೂರ್ಣಗೊಳಿಸಿ 4 ನೇ ಹಂತದಲ್ಲಿ ಅನುದಾನವನ್ನು ನೀಡಲಾಗಿದ್ದು 15 ನೇ ಹಣಕಾಸು ಯೋಜನೆಯಡಿ ಟೆಂಡರ್ ಪ್ರಕ್ರಿಯೆಯನ್ನೆ ನಡೆಸದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯ ಹರಿಹರ, ಹೊನ್ನಾಳಿ, ಚನ್ನಗಿರಿ, ಮಲೇಬೆನ್ನೂರು, ನ್ಯಾಮತಿ, ಚನ್ನಗಿರಿ, ಜಗಳೂರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರೋತ್ಥಾನದಡಿ ಮೂರು ಮತ್ತು 4 ನೇ ಹಂತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಮೂರನೇ ಹಂತ ಸಂಪೂರ್ಣ ಮುಗಿದಿದೆ. ನಾಲ್ಕನೇ ಹಂತದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನದಡಿ 70 ಕೋಟಿಗೆ ಕ್ರಿಯಾಯೋಜನೆ ರೂಪಿಸಿ 32.20 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 210 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. 110 ಕಾಮಗಾರಿಗಳು ಮುಕ್ತಾಯವಾಗಿದ್ದು 71 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 13 ಕಾಮಗಾರಿಗಳು ಟೆಂಡರ್‍ನಲ್ಲಿವೆ, 16 ಕ್ಕೆ ಟೆಂಡರ್ ಕರೆಯಲಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಟೆಂಡರ್ ಹಂತದಲ್ಲಿಯೇ ಅಧಿಕಾರಿಗಳು ಕಾಲಕಳೆಯುತ್ತಿದ್ದು ಇವೆಲ್ಲಾ ಕಾಮಗಾರಿಗಳನ್ನು ಮುಕ್ತಾಯ ಮಾಡುವವರೆಗೆ ಮುಂದಿನ ಹಂತದ ಕಾಮಗಾರಿಗೆ ಅನುದಾನ ನೀಡುವುದಿಲ್ಲ. ಈ ಕಾಮಗಾರಿಗಳನ್ನು ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದರು.

ಇದೇ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ್ ವಿ.ಶಿವಗಂಗಾ ಮಾತನಾಡಿ ಚನ್ನಗಿರಿ ಪುರಸಭೆಯಲ್ಲಿ ನಗರೋತ್ಥಾನ ಕಾಮಗಾರಿಗಳು ಸೇರಿದಂತೆ ಯಾವುದೇ ಕಾಮಗಾರಿಗಳನ್ನು ಸರಿಯಾಗಿ ಅನುಷ್ಟಾನ ಮಾಡುತ್ತಿಲ್ಲ, ಮಾಹಿತಿಯನ್ನು ಸಹ ಶಾಸಕರಿಗೆ ನೀಡುವ ಸೌಜನ್ಯತೆ ಹೊಂದಿಲ್ಲ. ಪಟ್ಟಣಕ್ಕೆ ವಿಶೇಷ ಅನುದಾನವನ್ನು ತರಲಾಗಿದ್ದು ಅದರ ಪ್ರಗತಿಯನ್ನು ಅಧಿಕಾರಿಗಳು ಅನುಷ್ಟಾನಕ್ಕೆ ಮುಂದಾಗುತ್ತಿಲ್ಲ ಎಂದಾಗ ಎಲ್ಲಾ ಕಾಮಗಾರಿಗಳ ವಿವರವನ್ನು ಶಾಸಕರ ಗಮನಕ್ಕೆ ತಂದು ಅನುಷ್ಟಾನ ಮಾಡಬೇಕೆಂದು ಸಚಿವರು ಸೂಚನೆ ನೀಡಿದರು.

ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪನವರು ಮಾತನಾಡಿ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಶಾಸಕರನ್ನು ಭೇಟಿ ಮಾಡುವುದಿಲ್ಲ, ಸಾರ್ವಜನಿಕರು ನಮ್ಮ ಹತ್ತಿರ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ, ಅಧಿಕಾರಿಗಳು ಭೇಟಿ ಮಾಡಿದರೆ ಅವರ ಗಮನಕ್ಕೆ ಹೇಳಲು ಸಾಧ್ಯವಾಗುತ್ತದೆ ಎಂದು ಸಚಿವರಿಗೆ ಸೂಕ್ತ ನಿರ್ದೇಶನ ನೀಡಲು ಪ್ರಸ್ತಾಪಿಸಿದರು.

ಇಂದಿರಾ ಕ್ಯಾಂಟಿನ್; ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 8 ಸೇರಿದಂತೆ 11 ಇಂದಿರಾ ಕ್ಯಾಂಟಿನ್‍ಗಳು ಇದ್ದು ಇದರೊಂದಿಗೆ ಹೆಚ್ಚುವರಿಯಾಗಿ ಪಾಲಿಕೆಯಲ್ಲಿ 2 ಹಾಗೂ ಹೊನ್ನಾಳಿಯಲ್ಲಿ 1 ಕ್ಯಾಂಟಿನ್ ಪ್ರಾರಂಭಿಸಲಾಗುತ್ತಿದೆ ಎಂದರು.

ಸ್ವಚ್ಚ ಭಾರತ್ ಮಿಷನ್ 1 ರಲ್ಲಿ 71 ಕಾಮಗಾರಿಗಳನ್ನು ತೆಗೆದುಕೊಂಡು 70 ಪೂರ್ಣಗೊಳಿಸಿದ್ದು 1 ಪ್ರಗತಿಯಲ್ಲಿದೆ, ಇದಕ್ಕಾಗಿ ಒಟ್ಟು 9.55 ಕೋಟಿ ವೆಚ್ಚ ಮಾಡಲಾಗಿದೆ. ಎಸ್.ಬಿ.ಎಂ.2 ರಡಿ 37 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 30 ಪ್ರಗತಿ, 7 ಮುಕ್ತಾಯವಾಗಿವೆ. ಇದರಲ್ಲಿಯೇ ಘನತ್ಯಾಜ್ಯ ನಿರ್ವಹಣೆಯ 7 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು ಸಂಗ್ರಹವಾಗಿರುವ 50656 ಟನ್ ಪಾರಂಪರಿಕ ತ್ಯಾಜ್ಯ ವಿಂಗಡಣೆಗೆ ಕ್ರಮ ವಹಿಸಲಾಗಿದೆ.

15 ನೇ ಹಣಕಾಸು ಯೋಜನೆ ಅನಿರ್ಬಂಧಿತ ನಿಧಿಯಡಿ 2023-24 ರಲ್ಲಿ 3.32 ಕೋಟಿಯಲ್ಲಿ 93 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಕೆಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. 2024-25 ರಲ್ಲಿ 3.5 ಕೋಟಿಯಲ್ಲಿ 98 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು 48 ಕಾಮಗಾರಿಗಳು ಮಾತ್ರ ಪ್ರಾರಂಭವಾಗಿವೆ.

ಕಾಮಗಾರಿಗಳ ಪ್ರಗತಿಯಲ್ಲಿ ಕುಂಠಿತವಾಗಿದ್ದು ಇದಕ್ಕೆ ಇಂಜಿನಿಯರ್‍ಗಳ ಕೊರತೆ ಇದೆ. ಸಾಕಷ್ಟು ಅನುದಾನವಿದ್ದರೂ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗದಿರುವುದನ್ನು ಮನಗಂಡು ಲಬ್ಯವಿರುವ ಇಂಜಿನಿಯರ್‍ಗಳಿಂದ ಟೆಂಡರ್ ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಎಲ್ಲೆಲ್ಲಿ ಕಾಮಗಾರಿ ವಿಳಂಬವಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಮಹಾಂತೇಶ್ ಅವರು ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಪ್ರಗತಿ ವಿವರವನ್ನು ಸಭೆಗೆ ತಿಳಿಸಿದರು.

Next Post
RCB ಸಂಭ್ರಮಾಚರಣೆ: 18 ರೂಪಾಯಿಗೆ ಬಿರಿಯಾನಿ ಮಾರಾಟ..!

RCB ಸಂಭ್ರಮಾಚರಣೆ: 18 ರೂಪಾಯಿಗೆ ಬಿರಿಯಾನಿ ಮಾರಾಟ..!

Leave a Reply Cancel reply

Your email address will not be published. Required fields are marked *

Recent Posts

  • ಮನೆಯ ವಾಸ್ತು ಶಾಸ್ತ್ರದ ನಿರ್ಮಾಣದ ಮಾಹಿತಿ
  • ನಿಮ್ಮ ಜಾತಕದಲ್ಲಿ ಯಾವ ದಶಾಭುಕ್ತಿ ಇದ್ದರೆ ಒಳ್ಳೆಯದು!
  • ಭದ್ರಾ ಜಲಾಶಯ ತುಂಬಲು ಇನ್ನು ಕೇವಲ 39.7 ಅಡಿ ಅಷ್ಟೇ ಬೇಕು!
  • ಏಕದಿನ ನಿವೃತ್ತಿಯ ನಂತರ ಫಾರ್ಮ್ ಗೆ ಮರಳಿದ ಮ್ಯಾಕ್ಸ್‌ವೆಲ್: ವಾಷಿಂಗ್ಟನ್ ಫ್ರೀಡಂಗೆ ಭಾರೀ ಗೆಲುವು
  • ಇಸ್ರೇಲ್ – ಇರಾನ್ ಸಂಘರ್ಷ: ಮಧ್ಯಪ್ರಾಚ್ಯದಲ್ಲಿ ಮತ್ತೊಂದು ನಷ್ಟ ಎದುರಿಸುವ ಭಯದಲ್ಲಿ ರಷ್ಯಾ!

Recent Comments

No comments to show.

Archives

  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In