SUDDIKSHANA KANNADA NEWS/ DAVANAGERE/ DATE:18-10-2023
ಮಂಗಳೂರು: ಇದು ಶಾಕಿಂಗ್ ನ್ಯೂಸ್. ಯಾಕೆಂದರೆ ತಮ್ಮ ಪಾಡಿಗೆ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಬಾಲಕಿಯರು ಸೇರಿದಂತೆ ಐವರ ಮೇಲೆ ಇದ್ದಕ್ಕಿದ್ದ ಹಾಗೆ ಕಾರು ಹರಿದಿದೆ. ಈ ವಿಡಿಯೋ (Video) ವೈರಲ್ ಆಗಿದ್ದು, ವಿಡಿಯೋ ಹೌಹಾರುವಂತಿದೆ.
Read Also This Story:
ಗೋಧಿ (Wheat) ಬೆಳೆಗಾರರಿಗೆ ಬಂಪರ್ ಸುದ್ದಿ, ಪ್ರತಿ ಕ್ವಿಂಟಾಲ್ ಗೆ 150 ರೂ. ಹೆಚ್ಚಳ, ರೈತರಿಗೆ ಸಿಗಲಿದೆ 2275 ರೂ. ಬೆಂಬಲ ಬೆಲೆ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಮಂಗಳೂರಿನ ಲೇಡಿ ಹಿಲ್ – ಮಣ್ಣಗುಡ್ಡ ರಸ್ತೆಯಲ್ಲಿ ನಾಲ್ವರು ಬಾಲಕಿಯರು ಹಾಗೂ ಯುವತಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಐವರಿಗೆ ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ
ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
KA19MD5676 ನಂಬರ್ ನ ಹೊಂಡಾ ಇಯಾನ್ ಕಾರು ಇದಾಗಿದ್ದು, ಕಮಲೇಶ್ ಬಲ್ದೇವ್ ಎಂಬಾತ ಚಾಲನೆ ಮಾಡುತ್ತಿದ್ದ ಎಂದು ಮಾಹಿತಿ ಸಿಕ್ಕಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ನ ರೂಪಶ್ರೀ ಸಾವು ಕಂಡಿದ್ದಾರೆ. ಸ್ವಾತಿ (26), ಹಿತನ್ವಿ (16), ಕೃತಿಕಾ (16), ಯತಿಕಾ (12) ಗಾಯಗೊಂಡವರೆಂದು ಗುರುತಿಸಲಾಗಿದೆ. ಈ ಕೃತ್ಯ ಎಸಗಿದ ಬಳಿಕ ಆರೋಪಿ ಚಾಲಕ ಕಮಲೇಶ್ ಬಲ್ಡೇವ್ ಎಸ್ಕೇಪ್ ಆಗಿದ್ದಾನೆ. ಬಳಿಕ ತನ್ನ ತಂದೆ ಜೊತೆಗೆ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಗೆ ಆಗಮಿಸಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.