SUDDIKSHANA KANNADA NEWS/ DAVANAGERE/ DATE:20-03-2025
ದಾವಣಗೆರೆ: ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ದಾವಣಗೆರೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಗಾಂಧಿನಗರ ಗ್ರಾಮದ ಬಳಿಯ ರಾಜ್ಯ ಹೆದ್ದಾರಿ 65ರಲ್ಲಿ ನಡೆದಿದೆ.
ತೋಳಹುಣಸೆಯ ಗ್ರಾಮದ ವಾಸಿ ಬೈಕಿನಲ್ಲಿದ್ದ ಚಂದ್ರಾನಾಯ್ಕ್ ( 47), ಯುವರಾಜ್ (2) ಮೃತಪಟ್ಟಿದ್ದು, ಚಂದ್ರಾನಾಯ್ಕ್ ಪತ್ನಿ ರೇಣುಕಾಬಾಯಿ (45) ಮಗ ಪ್ರೀತಂ (18) ಗಾಯಗೊಂಡಿದ್ದು, ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನು ಆಸ್ಪತ್ರೆಯ ಶವಗಾರದಲ್ಲಿರಿಸಿದ್ದು, ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ 6 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ದಾವಣಗೆರೆ ಕಡೆಯಿಂದ ಜಗಳೂರು ಕಡೆ ಹೋಗುತ್ತಿದ್ದ ಕೆಎ-43, ಪಿ-2172 ಕಾರು ಹಾಗೂ ಜಗಳೂರು ಕಡೆಯಿಂದ ದಾವಣಗೆರೆ ಕಡೆ ಹೋಗುತ್ತಿದ್ದ ಕೆಎ-17, ಹೆಚ್.ಎಫ್-6519 ನಂಬರ್ ನ ತ್ರಿಚಕ್ರ ಮೋಟಾರ್ ಬೈಕ್ ವಾಹನದ (ವಿಕಲಚೇತನರ ಮೋಟಾರ್ ಬೈಕ್) ಮಧ್ಯೆ ಅಪಘಾತವಾಗಿದ್ದು, ಬೈಕಿನಲ್ಲಿದ್ದ ಚಂದ್ರಾನಾಯ್ಕ್ ಬಾಗೂ ಯುವರಾಜ್ ಮೃತಪಟ್ಟರು.
ಮೃತ ಚಂದ್ರಾನಾಯ್ಕ್ ಅವರು ಕಳೆದ ಹತತು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ವಿಕಲಚೇತನರಾಗಿದ್ದರು. ತ್ರಿಚಕ್ರ ಮೋಟಾರ್ ಬೈಕ್ ಉಪಯೋಗಿಸುತ್ತಿದ್ದು, ಬೈಕ್ ನಲ್ಲಿ ನಾಲ್ವರು ಪ್ರಯಾಣಿಸುತ್ತಿರುವಾಗ ಅಪಘಾತ ಆಗಿದೆ. ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.