SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ಸ್ವಾಭಿಮಾನಿ ಬಳಗದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಎಸ್. ಎಸ್. ಬಡಾವಣೆಯ ಎ. ಬ್ಲಾಕ್ ನಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಬಳಗದ ಉದ್ಘಾಟನೆ, ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್, ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ತಂಜೀಮ್ ಉಲೇಮಾ ಅಹಲೇ ಸುನ್ನತ್ ಅಧ್ಯಕ್ಷ ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ, ಬಾಸ್ಕೋ ಡಾನ್ ನ ಫಾದರ್ ರೆಜಿ ಜೇಕಬ್ ಅವರು ಸಾಧಕರನ್ನು ಸನ್ಮಾನಿಸಿದರು.
ಜಾನಪದ ಕಲಾವಿದರಾದ ಯುಗಧರ್ಮ ರಾಮಣ್ಣ, ತಮಟೆ ವಾದ್ಯ ಕಲಾವಿದ ಎ. ಕೆ. ಹನುಮಂತಪ್ಪ, ಇಂಟರ್ ನ್ಯಾಷನಲ್ ಗಿನ್ನಿಸ್ ಬುಕ್ ರೆಕಾರ್ಡ್ ಸಾಧಕಿ ಕು. ಎಸ್. ಸ್ತುತಿ, ಶವ ಸಂಸ್ಕಾರ ಕಾಯಕ ಯೋಗಿ ಗೂಳಪ್ಪ ನೀಲಪ್ಪ ಮುಗದೂರ, ಪ್ರಗತಿಪರ ರೈತರಾದ ಕೆ. ಟಿ. ಚಂದ್ರಶೇಖರ್, ಯೋಗಪಟು ಕು. ಕೆ. ವೈ. ಸೃಷ್ಟಿ, ಕರಾಟೆ ಪಟು ನಿಧಿ ಬಿ. ಎ. ಬೇತೂರು, ಕಟ್ಟಡ ಕಾರ್ಮಿಕ ಫೆಡರೇಷನ್ ಅಧ್ಯಕ್ಷ ವಿ. ಲಕ್ಷ್ಮಣ್, ಅಂಗವಿಕಲರ ಆಶಾಕಿರಣ ಟ್ರಸ್ಟ್ ನ ಸಿ. ಹನುಮೇಶ್ ರವರಿಗೆ ಸ್ವಾಭಿಮಾನಿ ಬಳಗದಿಂದ ಗೌರವಿಸಲಾಯಿತು.
ಇನ್ನ ಬಳಿಕ ಮಾತನಾಡಿದ ಸಾಧಕರು, ನಮ್ಮನ್ನು ಗುರುತಿಸಿ ಸ್ವಾಭಿಮಾನಿ ಬಳಗದಿಂದ ಸನ್ಮಾನಿಸಿದ್ದು ಖುಷಿ ಕೊಟ್ಟಿತು ಎಂದು ಸನ್ಮಾನಿತರು ಸಂತಸ ಹಂಚಿಕೊಂಡರು.