SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಕೇವಲ 115 ರೂಪಾಯಿ ವಿಚಾರಕ್ಕೆ ದಾವಣಗೆರೆಯಲ್ಲಿ ಚಾಕು ಇರಿತ ಆದ ಘಟನೆ ನಡೆದಿದೆ.
ಸಿದ್ದೇಶ್ (40) ಎಂಬ ವ್ಯಕ್ತಿಗೆ ಚಾಕು ಇರಿದಿದ್ದು, ನಗರದ ಬೇತೂರು ರಸ್ತೆಯ 5ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಮಂಜುನಾಥ್ ಎಂಬಾತನೇ ಚಾಕು ಇರಿದ ಆರೋಪಿ. ಸದ್ಯ ಆರೋಪಿಯನ್ನು ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.
ಸಿದ್ದೇಶ್ ಅವರು ನಡೆಸುತ್ತಿದ್ದ ಬೇಕರಿಗೆ ಮಂಜುನಾಥ್ ಬಂದಿದ್ದಾನೆ. ಸಿದ್ದೇಶ್ ಅವರ ಅಯ್ಯಂಗಾರ ಬೇಕರಿಯಲ್ಲಿ 115 ರೂಪಾಯಿ ವಸ್ತುಗಳನ್ನು ಮಂಜುನಾಥ್ ಖರೀದಿಸಿದ್ದ. ಈ ವೇಳೆ ಮಂಜುನಾಥ್ ಬಳಿ ಸಿದ್ದೇಶ್ ಹಣ ಕೇಳಿದ್ದಾನೆ.
ಇದರಿಂದ ಕುಪಿತಗೊಂಡ ಮಂಜುನಾಥ್ ಬೇಕರಿಯ ಸಿದ್ದೇಶ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸಿದ್ದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.






