ಬೆಂಗಳೂರು, ಜನವರಿ 05: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆಂಧ್ರ ಪ್ರದೇಶದಲ್ಲಿ ಪ್ರಖ್ಯಾತ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಭಕ್ತರ ಕ್ಯೂ ವ್ಯವಸ್ಥೆ ತಿರುಪತಿ ದೇವಸ್ಥಾನದಲ್ಲಿರುವಂತೆ ಇರಲಿದೆ. ಕರ್ನಾಟಕಲ್ಲಿ ಇಂತಹ ವ್ಯವಸ್ಥೆಯನ್ನು ಇದೇ ಮೊದಲ ಧರ್ಮಸ್ಥಳ ಶ್ರೀ ಮಂಜುನಾಥ್ ದೇವಸ್ಥಾನದಲ್ಲಿ ಜಾರಿಗೊಳಿಸಲಾಗುತ್ತಿದೆ.
ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರು ವಿಶ್ರಾಂತಿ ಕೊಠಡಿ (ಭವನಗಳಲ್ಲಿ) ಗಂಟೆ ಗಟ್ಟಲೆ ಕಾದು ದೇವರ ದರ್ಶನ ಪಡೆಯುತ್ತಾರೆ. ಇದಕ್ಕೆಂದೆ ಪ್ರತ್ಯೇಕ ಕೊಠಡಿಗಳು, ಮೂಲ ಸೌಕರ್ಯ, ಊಟ, ತಿಂಡಿ ಹೀಗೆ ಎಲ್ಲ ವ್ಯವಸ್ಥೆ ಅಲ್ಲಿದೆ. ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಬದಲಾಗಿ ಸರತಿ ಸಾಲಿನಲ್ಲಿ ನಿಂತು ಜನರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಇತ್ತು.
ಸರತಿ ಸಾಲಿನಲ್ಲಿ ನಿಲ್ಲುವ ಪದ್ಧತಿಗಿಂತಲೂ ಮತ್ತಷ್ಟು ಅನುಕೂಲಕರ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಮೂಲಸೌಕರ್ಯಗಳನ್ನು ಒಳಗೊಂಡ ವ್ಯವಸ್ಥೆ ಜಾರಿಗೆ ಮಾಡಲಾಗುತ್ತಿದೆ. ಇದಕ್ಕಾಗಿ ನೂತನ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಅದನ್ನು ಜನವರಿ 07ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಧರ್ಮಸ್ಥಳದಲ್ಲಿ ಜನರು ಭಕ್ತರು ದೇವರ ದರ್ಶನಕ್ಕೆ ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಅವರಿಗೆಂದೇ ವಿಶಾಲ ಭವನಗಳನ್ನು (ಕೊಠಡಿ) ನಿರ್ಮಿಸಲಾಗಿದೆ. ಅಲ್ಲಿ ಅಗತ್ಯ ಮೂಲ ಸೌಕರ್ಯ ಎಲ್ಲವು ಇರುತ್ತದೆ. ಒಂದೊಂದೆ ಭವನದ್ಲಲಿರುವ ಭಕ್ತರನ್ನು ಸರದಿಯಂತೆ ದೇವರ ದರ್ಶನಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಯವರೆಗೆ ಭಕ್ತರು ಭವನದಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸರತಿ ಸಾಲಿನಲ್ಲಿ ಬದಲಾದಂತೆ ಭಕ್ತರು ಒಂದು ಭವನದಿಂದ ಮುಂದಿನ ಮತ್ತೊಂದು ಭವನಕ್ಕೆ ಶೀಫ್ಟ್ ಆಗುತ್ತಾ ಸಾಗಿ ದೇವರ ದರ್ಶನ ಪಡೆಯುತ್ತಾರೆ.
ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಭಕ್ತರ ಸರದಿಯಲ್ಲಿ ಕಾಯಲು 16 ಭವನ ನಿರ್ಮಿಸಲಾಗಿದೆ. ಒಂದು ಭವನದಲ್ಲಿ 800 ಮಂದಿ ಭಕ್ತರು ಇರುವಷ್ಟು ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಭಕ್ತರು ಸರತಿ ಸಾಲಿನಂತೆ ನಿಂತು ಇಲ್ಲಿ ಕಾಯಬೇಕಿಲ್ಲ, ಕೂರಲು ಆಸನ ವ್ಯವಸ್ಥೆ ಇರುತ್ತದೆ.
ಮುಂದಿರುವ ಭವನದ ಭಕ್ತರು ದರ್ಶನ ಪಡೆಯುತ್ತಿದ್ದಂತೆ ಖಾಲಿ ಆಗುವ ಭವನಗಳಿಗೆ ಹಿಂದಿರುವ ಭವನದ ಭಕ್ತರು ಶಿಫ್ಟ್ ಮಾಡಲಾಗುತ್ತದೆ. ಇದು ದೇವರ ದರ್ಶನ ಪಡೆಯುವವರಿಗೂ ಮುಂದುವರಿಯುತ್ತದೆ. ಈ ಭವನದಲ್ಲಿಗಳಲ್ಲಿ ಮಕ್ಕಳ ಆರೈಕೆ ಕೊಠಡಿ, ಶೌಚಾಲಯ ವ್ಯವಸ್ಥೆ ಇದೆ. ಗಾಳಿ, ಬೆಳಕಿಗೆ ಕೊರತೆ ಆಗದಂತೆ ನೋಡಿಕೊಳ್ಳಳಾಗಿದೆ.
ಒಟ್ಟು 2,75 ಲಕ್ಷ ಚದರ ಅಡಿಯಲ್ಲಿ ಈ ಸಂಕೀರ್ಣ ನಿರ್ಮಿಸಲಾಗಿದೆ. ಒಟ್ಟು ಎರಡು ಅಂತಸ್ತು ಹೊಂದಿದೆ. ಆಧನಿಕ ತಂತ್ರಜ್ಞಾನದಡಿ ಸಕಲ ವ್ಯವಸ್ಥೆಯನ್ನು ಭಕ್ತರಿಗೆ ಇಲ್ಲಿ ಸುಗುವಂತೆ ಮಾಡಲಾಗಿದೆ. ವಯಸ್ಸಾದವರು, ಮಕ್ಕಳು, ಮಹಿಳೆಯರು ನಿಂತು ಕಾಯುವುದು ತಪ್ಪಲಿದೆ.
ಈ ಭವನದಲ್ಲಿಗಳಲ್ಲಿ ಕ್ಯಾಂಟಿನ್, ಕುಡಿಯಲು ನೀರಿನ ವ್ಯವಸ್ಥೆ, ವಿಶ್ರಾಂತಿಗೆ ವ್ಯವಸ್ಥೆ ಇದೆ. ಸಿಸಿ ಕ್ಯಾಮೆರಾ ಅಳವಡಿಕೆ ಜೊತೆಗೆ ಭಕ್ತರಿಗೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಕರ್ನಾಟಕದಲ್ಲಿ ಇಂಥದ್ದೊಂದು ಮಾದರಿ ಆಗಿರುವುದು ಧರ್ಮಸ್ಥಳದಲ್ಲಿಯೇ ಮೊದಲು
ಧರ್ಮಸ್ಥಳದ ಈ ವ್ಯವಸ್ಥೆಯನ್ನು ಉಪರಾಷ್ಟ್ರಪತಿಗಳು ಉದ್ಘಾಟಿಸಲಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ದಿನೇಶ್ ಗುಂಡೂರಾವ್, ಹೇಮಾವತಿ ವಿ.ಹೆಗ್ಗಡೆ, ಸಂಸದ ಬ್ರಿಜೇಶ್ ಚೌಟ, ಶಾಸಕ ಹರಿಪೂಂಜ, ಡಾ.ಸುದೇಶ್ ಧನಕರ್ ಮತ್ತಿತರರು ಹಾಗೂ ಅಪಾರ ಭಕ್ತಗಣ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಲಾಗಿದೆ.