SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ಇಂದಿನಿಂದ ವಿಶ್ವದಾದ್ಯಂತ ಪವಿತ್ರ ರಂಜಾನ್ ತಿಂಗಳು ಪ್ರಾರಂಭ. ಎಲ್ಲಾ ಕಡೆಗಳಲ್ಲಿಯೂ ಸಮಸ್ತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ತಿಂಗಳು ಪೂರ್ತಿ ಕಠಿಣ ಉಪವಾಸ ವ್ರತ ಕೈಗೊಳ್ಳುತ್ತಾರೆ. ಅದೇ ರೀತಿ ಕೆ. ಟಿ. ಜೆ. ನಗರದ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಜಿಕ್ರಿಯಾ ಅವರ ಕಿರಿಯ ಪುತ್ರ ಐದು ವರ್ಷದ ಮೊಹಮ್ಮದ್ ಫೈಜಾನ್ ತನ್ನ ಮೊದಲನೇ ದಿನದ ಕಠಿಣ ಉಪವಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಮೆಚ್ಚುಗೆ ವ್ಯಕ್ತವಾಗಿದೆ.
ಉಪವಾಸದ ಸಂದರ್ಭದಲ್ಲಿ ಹನಿ ನೀರೂ ಸಹ ಕುಡಿಯದೇ ವ್ರತ ಆಚರಿಸಬೇಕು. ಅಷ್ಟು ಕಠಿಣ ವ್ರತ. ಅದರಂತೆ ಮೊಹಮ್ಮದ್ ಫೈಜಾನ್ ಕೂಡ ಬೆಳಿಗ್ಗೆಯಿಂದ ಸಂಜೆವರೆಗೆ ಕೇವಲ ದೇವರ ನಾಮ ಪಠಣೆ ಮಾಡುತ್ತಾ ಇಂಥ ರಣ ಬಿಸಿಲಿನಲ್ಲಿಯೂ ಸಹ ಒಂದು ಹನಿ ನೀರೂ ಸಹ ಕುಡಿಯದೇ ತನ್ನ ಮೊದಲ ದಿನದ ಉಪವಾಸವನ್ನು ಯಶಸ್ವಿಗೊಳಿಸಿದ್ದಾನೆ.
ಮುಂದಿನ ಎಲ್ಲಾ ದಿನಗಳ ಉಪವಾಸ ಕೈಗೊಳ್ಳುವ ನಿರ್ಧಾರ ಮಾಡಿರುವ ಮೊಹಮ್ಮದ್ ಫೈಜಾನ್ ಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ.