ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಂವಿಧಾನ ಬದಲಾವಣೆ ಮಾಡಲು ಮುಂದಾದ್ರೆ ನೀವು ಉಳಿಯಲ್ಲ: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್!

On: July 19, 2025 2:29 PM
Follow Us:
ಮಲ್ಲಿಕಾರ್ಜುನ ಖರ್ಗೆ
---Advertisement---

SUDDIKSHANA KANNADA NEWS/ DAVANAGERE/ DATE:19_07_2025

ಮೈಸೂರು: ಡಾ. ಬಿ. ಆರ್. ಅಂಬೇಡ್ಕರ್ ತಯಾರು ಮಾಡಿದ ಸಂವಿಧಾನ ತಿದ್ದುಪಡಿ ಅಥವಾ ಬದಲಾವಣೆ ಮಾಡಲು ಮುಂದಾದರೆ ನೀವು ಉಳಿಯುವುದಿಲ್ಲ. ನೀವು ಮಾಡಿದ್ದಾರಾ? ನಿಮ್ಮ ತಾತಾ, ಆರ್ ಎಸ್ ಎಸ್ ನವರು ಮಾಡಿದರಾ? ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

READ ALSO THIS STORY: RSS ಹಿರಿಯ ಕಾರ್ಯಕರ್ತನೆಂದು ಹೇಳಿಕೊಂಡಿದ್ದ ಮತಾಂತರಿ ಛಂಗೂರ್ ಬಾಬಾ! ಲೆಟರ್ ಹೆಡ್ ನಲ್ಲಿ ನರೇಂದ್ರ ಮೋದಿ ಚಿತ್ರ!

ಮೈಸೂರಿನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸರ್ಕಾರದ 2 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಸಂವಿಧಾನ ಬದಲಾವಣೆ ಮಾಡಲು ಬಿಡಲ್ಲ, ತಿದ್ದುಪಡಿಗೆ ಬಿಡಲ್ಲ ಎಂದು
ಎಚ್ಚರಿಕೆ ನೀಡಿದರು.

ದೇಶದ ಸಂವಿಧಾನ ರೂಪಿಸಲು ಏಳು ಮಂದಿ ಶ್ರಮಿಸಿದರು. ಇದರಲ್ಲಿ ಪ್ರಮುಖರು ಡಾ. ಬಿ. ಆರ್. ಅಂಬೇಡ್ಕರ್. ಸಂವಿಧಾನದಿಂದಲೇ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿದ್ದು ನರೇಂದ್ರ ಮೋದಿ. ಸಂವಿಧಾನಕ್ಕೆ ತಲಬಾಗಿ
ಹಣೆಗೆ ಹಚ್ಚಿಕೊಂಡು ಹೋದರು. ಎಲ್ಲರಿಗೂ ಒಂದೇ ಹಕ್ಕು ನೀಡಿದ್ದು ಅಂಬೇಡ್ಕರ್. ಶ್ರೀಮಂತರು, ಬಡವರು ಇರಲಿ ಒಂದೇ ಹಕ್ಕು ಕೊಟ್ಟವರು. ಎಲ್ಲರಿಗೂ ಮತದ ಮೌಲ್ಯ ನೀಡಿದವರು ಅಂಬೇಡ್ಕರ್ ಹಾಗೂ ಜವಾಹರ್ ಲಾಲ್
ನೆಹರು. ಅಧಿಕಾರ ಮುಗಿದ ಮೇಲೆ ನಿಮ್ಮ ಕಥೆನೂ ಮುಗಿಯಿತು. ಸಂವಿಧಾನ ತೆಗೆಯುವ ಪ್ರಯತ್ನ ನಡೆದಿದೆ. ಇದಕ್ಕೆ ಮತ್ತೆ ಕೈ ಹಾಕಿದರೆ ಸುಮ್ಮನೆ ಕೂರಲ್ಲ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ದೇಶದ ಜನತೆ ಬಿಡುವುದಿಲ್ಲ
ಎಂದು ಗುಡುಗಿದರು.

ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರಾದ ಮಹಾದೇವಪ್ಪ ಸೇರಿದಂತೆ ಮೈಸೂರು ಭಾಗದ ಶಾಸಕರು, ಸಚಿವರು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment