SUDDIKSHANA KANNADA NEWS/ DAVANAGERE/ DATE:13_07_2025
ದಾವಣಗೆರೆ: ದಾವಣಗೆರೆ ನಿರ್ಮಿತಿ ಕೇಂದ್ರದಲ್ಲಿ ಅಕ್ರಮ ಹಾಗೂ ಪ್ರಭಾವ ಬಳಸಿ ನೇಮಕಗೊಂಡವರ ಸಸ್ಪೆಂಡ್ ಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಈ 12
ಅಧಿಕಾರಿಗಳ ಸಸ್ಪೆಂಡ್ ಮಾಡಬೇಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಆಗ್ರಹಿಸಿದ್ದಾರೆ.
READ ALSO THIS STORY: ದಾವಣಗೆರೆಯಲ್ಲಿ ವಾಕಿಂಗ್ ಹೋಗಿದ್ದಾಗ ಹೃದಯಾಘಾತವಾಗಿ ಉದ್ಯಮಿ ಸಾವು: ಸಿಸಿಟಿವಿಯಲ್ಲಿ ಸೆರೆ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೈಯಕ್ತಿಕವಾಗಿ ಭೇಟಿ ಮಾಡಿ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾಗಲಿ ಯಾವುದೇ ಸೂಕ್ತ ಕ್ರಮ ಜರುಗಿಸದೆ ಮೌನವಾಯಿಸಿದ್ದಾರೆ. ನಾನು ಕೇಂದ್ರ ಕಚೇರಿ ಕಾರ್ನಿಕ್ ಸಂಸ್ಥೆಯಿಂದ ಮಾಹಿತಿ ಪಡೆದ್ದಿದೇನೆ. ಈ ಮಾಹಿತಿ ಜಿಲ್ಲಾಧಿಕಾರಿ ಬಳಿ ಇದ್ದರೂ ಏನು ಕಾನೂನು ಕ್ರಮ ಜರುಗಿಸಿಲ್ಲ. ಎಲ್ಲೋ ಒಂದು ಕಡೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಯಾವುದೇ ಅನುಭಾವಿಲ್ಲದೇ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರನ್ನು ನೇರ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಇಂದೇ ಪ್ರೊಜೆಕ್ಟ್ ಇಂಜಿನಿಯರ್ ಆಗಿ ರಾಜಪ್ಪ ಎಂಬುವವರು ಕಾರ್ಯನಿರ್ವಹಿಸುತ್ತಿದ್ದು ವಿಆರ್ ಎಸ್ ನಂತರ ಅವರ ಸಂಬಂಧಿಕ ರವಿ ಅವರನ್ನು ನೇಮಕಮಾಡಿಕೊಂಡಿದ್ದರು. ನಂತರ ಈ ಹುದ್ದೆಗೆ ರಾಜಪ್ಪನವರ ಮತ್ತೊಬ್ಬ ಸಂಬಂಧಿಯಾದ ಚಂದನ್ ಅವರನ್ನು ನೇಮಕಮಾಡಿದ್ದಾರೆ. ಇವೆಲ್ಲವೂ ಅಕ್ರಮ ನೇಮಕಾತಿಯೇ. ಕೂಡಲೇ ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಈ ಎಲ್ಲ ದಾಖಲೆಯೊಂದಿಗೆ ನ್ಯಾಯಾಲಯ ಮೆಟ್ಟಿಲು ಹತ್ತಲು ಸಿದ್ದವಿದ್ದೇನೆ. ಈ ನಿರ್ಮಿತಿ ಕೇಂದ್ರ ನಿಯಂತ್ರಣವನ್ನು ಈ ಹಿಂದಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಶಿವಮೂರ್ತಿ ಅವರು ಮಾಡುತ್ತಿದ್ದರು. ಕೆ.ಟಿ.ಟಿ.ಪಿ ಆಕ್ಟ್ ಪ್ರಕಾರ ಅವರ ವ್ಯಾಪ್ತಿಗೆ ಬರುವ ಕಾಮಗಾರಿಗಳು ಸರಕಾರಿ ಕಟ್ಟಡಗಳು, ರಸ್ತೆಗಳು, ಚರಂಡಿಗಳು ಬರುವಂತದ್ದು. ಇದನ್ನ ಹೊರತುಪಡಿಸಿ ಕಾನೂನು ಬಾಹಿರವಾಗಿ ಹೈ ಮಾಸ್ಕ್ ಲೈಟ್,ಯುಜಿ ಕೇಬಲ್, ಏರ್ ಸೋರ್ಸ್ ಸಪ್ಲೆ ಅಂದರೆ ವಾಟರ್ ಹೀಟರ್, ಸೋಲಾರ್ ಇವನ್ನೆಲ್ಲ ಸರಕಾರಿ ಹಾಸ್ಟೆಲ್, ಸರಕಾರಿ ಆಸ್ಪತ್ರೆಗಳಿಗೆ ಅಳವಡಿಸುವ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ನಿಗದಿತ ದರಕ್ಕಿಂತ ಹತ್ತು ಪಟ್ಟು ಹೆಚ್ಚು ಬಿಲ್ಲುಗಳನ್ನು ಮಾಡಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಜಿಲ್ಲಾಸ್ಪತ್ರೆ ಮಾಡಿರುವ ಕಾಮಗಾರಿಗಳಗೆ ಸಚಿವರ ಹೆಸರನ್ನು ಹೇಳಿಕೊಂಡು ಶ್ಯಾಗಲೆ ಜಯಣ್ಣ ಎಂಬ ವ್ಯಕ್ತಿ ಸುಮಾರು 80 ಲಕ್ಷ ರೂಪಾಯಿಗಳನ್ನು ಲಂಚ ಪಡೆದಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ. ಎಂ. ಸತೀಶ್ ಕೊಳೆನಹಳ್ಳಿ , ಎನ್. ಹೆಚ್. ಹಾಲೇಶ್ ನಾಯಕ, ರಾಜು ತೋಟಪ್ಪನವರ್ ಹಾಜರಿದ್ದರು.