SUDDIKSHANA KANNADA NEWS/ DAVANAGERE/ DATE:11-04-2025
ಬಳ್ಳಾರಿ: ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿಯ 2025-26ನೇ ಸಾಲಿನ 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಷ್ಠಿತ ಶಾಲೆಗಳಾದ ಶ್ರೀ ವಿಶ್ವೇಶ್ವರಯ್ಯ ಫ್ರೌಢ ಶಾಲೆ ಅಲ್ಲೀಪುರ (ಬೆಸ್ಟ್ ಸ್ಕೂಲ್), ಶ್ರೀ ನಂದ ವಸತಿ ಶಾಲೆ ವಿದ್ಯಾನಗರ, ಶ್ರೀ ನಂದಿ ಫ್ರೌಢಶಾಲೆ (ಸಿಬಿಎಸ್ಇ) ಬೆಳಗಲ್ ಕ್ರಾಸ್, ವಿಜಯಮೇರಿ ಪ್ರಾಥಮಿಕ ಶಾಲೆ
ಸಿರುಗುಪ್ಪ (ವಸತಿ ಸಹಿತ), ಬೃಂದಾ ಇಂಟರ್ ನ್ಯಾಷನಲ್ ಸ್ಕೂಲ್ ದಮ್ಮೂರು(ವಸತಿ ಸಹಿತ) ಶಾಲೆಗಳಿಗೆ ಏ.15 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆ ಬರೆಯಲು ಇಚ್ಛಿಸುವ ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳು ಅರ್ಜಿಗಳನ್ನು ಸಮಾಜ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಮೇ.3 ಕೊನೆಯ ದಿನವಾಗಿದೆ.
ಅರ್ಹತೆಗಳು:
ಪರಿಶಿಷ್ಟ ಜಾತಿಯ ವಿದ್ಯಾರ್ಥಿಯಾಗಿರಬೇಕು.
ಅಭ್ಯರ್ಥಿಯ ಕುಟುಂಬದ ಆದಾಯ ರೂ.2.00 ಲಕ್ಷದ ಒಳಗಿರಬೇಕು.
ಅಭ್ಯರ್ಥಿ 5ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ಬೇಕಾದ ದಾಖಲೆಗಳು:
ವಿದ್ಯಾರ್ಥಿಯ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆ, ಪಾಸ್ಪೋರ್ಟ್ ಸೈಜ್ 2 ಫೋಟೋ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ,
ಮುಖೋಪಾದ್ಯಾಯರಿಂದ ನಡತೆ ಪ್ರಮಾಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ದೂ.08392-244738, ಮೊ.9480843073 ಅಥವಾ 1ನೇ ಗೇಟ್ ಹತ್ತಿರ ಅಂಬೇಡ್ಕರ್ ಭವನದ ಸಮಾಜ ಕಲ್ಯಾಣಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.