SUDDIKSHANA KANNADA NEWS/ DAVANAGERE/ DATE:19-03-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದೆ. 50 ಸಾವಿರ ರೂಪಾಯಿಗೂ ಹೆಚ್ಚು ಹಣ ಸಾಗಣೆ ಮಾಡಲು ದಾಖಲೆ ಅವಶ್ಯಕವಾಗಿ ಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಜೊತೆಗೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 3.89 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ಮುಖ್ಯಸ್ಥರಾದ ಮ್ಲಿಕಾರ್ಜುನ್ ಅವರ ನೇತೃತ್ವದ ಎಸ್. ಎಸ್. ಟಿ. ತಂಡವು 3,89,780 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕ ಹಾಗೂ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲೆಯ ಗಡಿಭಾಗ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 32 ಕಡೆ ಚೆಕ್ ಪೋಸ್ಟ್ ಗಳು ಇದ್ದು, ಪೊಲೀಸರು ಬಿಗಿ
ತಪಾಸಣೆ ಕೈಗೊಂಡಿದ್ದಾರೆ.
ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಮೂವರ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ದಿನದ 24 ಗಂಟೆಯು ಕಾವಲು ನಡೆಸುವ ಮೂಲಕ ಅಕ್ರಮವಾಗಿ ಸಾಗಣೆ ಮಾಡುವ ವಸ್ತುಗಳು, ಮದ್ಯ, ನಗದು ಮತ್ತು ಇನ್ನಿತರೆ ಬಂಗಾರದ ವಸ್ತುಗಳ ಮೇಲೆ ನಿಗಾ ಇಟ್ಟಿದ್ದಾರೆ. ಈ ಆ ಮಾರ್ಗದಲ್ಲಿ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ವಸ್ತುಗಳನ್ನು ಸಾಗಣೆ ಮಾಡಲು ಅಭ್ಯಂತರ ಇಲ್ಲ.
ಆದರೆ ಸಂಬಂಧಿಸಿದ ವಸ್ತುಗಳು, ಹಣ, ಯಾವುದೇ ಇದ್ದಲ್ಲಿ ದಾಖಲೆಗಳು ಅತ್ಯವಶ್ಯಕವಾಗಿದೆ. ವಾಹನ ಸವಾರರು, ಸಾರ್ವಜನಿಕರು ಚೆಕ್ ಪೋಸ್ಟ್ ಗಳಲ್ಲಿ ಹಾಜರುಪಡಿಸುವ ಮೂಲಕ ಸಿಬ್ಬಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದರು.