ಕೊಟ್ಟೂರು: ಅಪರಾಧ ತಡೆ ಮಾಸಾಚರಣೆ ನಿಮಿತ್ತ ಶುಕ್ರವಾರ ಸಿಬ್ಬಂದಿಯೊಂದಿಗೆ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಿ ಮಾತನಾಡಿದ ಗೀತಾಂಜಲಿ ಶಿಂಧೆ ರವರು 18ವರ್ಷದೊಳಗಿನ ಮಕ್ಕಳ ಕೈಯಲ್ಲು ಬೈಕ್ ಕೊಟ್ಟರೆ 25ಸಾವಿರ ರೂ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪೋಷಕರಿಗೆ ಎಚ್ಚರಿಸಿದರು.
ಹೆಲ್ಮಟ್ಟ್ ಹಾಕಿಕೊಳ್ಳದೆ ವಾಹನ ಚಲಾಯಿಸುತ್ತಿದ್ದ ಸವಾರರನ್ನು ತಡೆದು, ತಮ್ಮ ಮೇಲೆ ಅವಲಂಬಿತರಾಗಿರುವ ತಂದೆ-ತಾಯಿ, ಅಕ್ಕ-ತಮ್ಮ, ಹೆಂಡತಿ-ಮಕ್ಕಳ ಕುಟುಂಬವಿದೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಘಾತಕ್ಕಿಡಾಗಿ ನಿಮ್ಮ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ಮನವರಿಕೆ ಮಾಡಿದರು.
ಬೈಕ್ ಸವಾರರು ತಮ್ಮ ಪ್ರಾಣದ ಸುರಕ್ಷತೆ ಮತ್ತು ಕುಟುಂಬದ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದ ಗೀತಾಂಜಲಿ ಶಿಂಧೆ, ಹೆಲ್ಮೆಟ್ ಧರಿಸದೆ ಇರುವ ಸವಾರರಿಗೆ ಹೆಲ್ಮೆಟ್ ಕೊಟ್ಟು ನಿತ್ಯ ಧರಿಸುವಂತೆ ಜಾಗೃತಿ ಮೂಡಿಸಿದರು.
ಬೈಕ್ ಸವಾರರು ಆರೋಗ್ಯ ರಕ್ಷಣೆ ಮತ್ತು ಕುಟುಂಬದ ಹಿತ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಪಿ.ಎಸ್.ಐ ಗೀತಾಂಜಲಿ ಶಿಂಧೆ ಅವರು ಬೈಕ್ ಜಾಥಾವನ್ನು ಹಮ್ಮಿಕೊಂಡಿದ್ದರು, ಹರಪನಹಳ್ಳಿ ರಸ್ತಯೆ ಪೋಲಿಸ್ ಠಾಣೆಯಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ ಹಾಗೂ ಗಾಂಧಿ ಸರ್ಕಲ್ ಮಾರ್ಗವಾಗಿ ಉಜ್ಜಿನಿ ಸರ್ಕಲ್ ಮೂಲಕ ಮರಳಿ ಪೋಲಿಸ್ ಠಾಣೆಗೆ ಜಾಗೃತಿ ನಡೆಯಿತು.