SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ಭೂ ಸ್ವಾಧೀನ ವ್ಯಾಜ್ಯಗಳ ಪರಿಹಾರದ ಸಂಬಂಧ ರೂ. 80 ಕೋಟಿ ವೆಚ್ಚ, ಹೊಸ ಬಡಾವಣೆ ನಿರ್ಮಾಣ ಮಾಡಲು ರೂ.100 ಕೋಟಿ ರೂಪಾಯಿಗಳನ್ನು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಾಯ್ದಿರಿಸಲಾಗಿದೆ.
ಶೇ.25ರಷ್ಟು ಕೆರೆ ಅಭಿವೃದ್ಧಿ ಶುಲ್ಕ ಸರ್ಕಾರಕ್ಕೆ ಪಾವತಿ ಮಾಡಬೇಕಾದ ಮೊತ್ತ ರೂ.62.50 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. 2024-25ನೇ ಸಾಲಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಅಭಿವೃದ್ಧಿಗಾಗಿ ರೂ.9.33 ಕೋಟಿಗಳನ್ನು ನೀಡಲು ಉದ್ದೇಶಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು
2025-26ನೇ ಸಾಲಿನಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಅಭಿವೃದ್ಧಿಗಾಗಿ ರೂ.6.60 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಮಹಾಯೋಜನೆಯಲ್ಲಿರುವ ದಾವಣಗೆರೆ ತಾಲ್ಲೂಕು ವಡ್ಡಿನಹಳ್ಳಿ ಕೆರೆ ಅಭಿವೃದ್ಧಿಗಾಗಿ ರೂ.2.00 ಕೊಟಿ, ದಾವಣಗೆರೆ ತಾಲ್ಲೂಕು ಹೊನ್ನೂರು ಕೆರೆ ಅಭಿವೃದ್ಧಿಗಾಗಿ ರೂ.2.30 ಕೋಟಿ, ನಾಗನೂರು ಕೆರೆಯನ್ನು ಆಧುನೀಕರಣಗೊಳಿಸುವುದು. ರೂ.2.30 ಕೋಟಿ, 2024-25ನೇ ಸಾಲಿನ ಮುಂದುವರೆದ ಕಾಮಗಾರಿಗಳ ವೆಚ್ಚಕ್ಕಾಗಿ ರೂ.5.66 ಕೋಟಿ ಕಾಯ್ದಿರಿಸಲಾಗಿದೆ.
2-25-26ನೇ ಸಾಲಿನ ಹೊಸ ಕಾಮಗಾರಿಗಳ ವೆಚ್ಚಕ್ಕಾಗಿ ರೂ.3.30 ಕೋಟಿಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ದಾವಣಗೆರೆ ನಗರದ ಶ್ರೀ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ಜವಾನ್ ಉದ್ಯಾನವನದಲ್ಲಿ ಯೋಗಾ ಪ್ಲಾಟ್ ಫಾರಂ ನಿರ್ಮಿಸಿ, ಜಿಮ್ ಸಾಮಗ್ರಿಗಳನ್ನು ಅಳವಡಿಸುವ ಕಾಮಗಾರಿಗೆ ರೂ.
25 ಲಕ್ಷ, ಹರಿಹರ ತಾಲ್ಲೂಕು ಅಮರಾವತಿ ಗ್ರಾಮದ ರಿಸನಂ:45 ಮತ್ತು 46 ರಲ್ಲಿರುವ ಉದ್ಯಾನವನವನ್ನು ಅಭಿವೃದ್ಧಿಗೆ ರೂ.1.00 ಕೋಟಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಬಸವೇಶ್ವರ ಬಡಾವಣೆಯ ಡಬಲ್ ರಸ್ತೆಯ ಪಕ್ಕದಲ್ಲಿ ಕುಂದುವಾಡ ರಿಸನಂ: 206ರಲ್ಲಿರುವ ಉದ್ಯಾನವನದ ಅಭಿವೃದ್ಧಿಗಾಗಿ ರೂ.20 ಲಕ್ಷ, ನಗರದ ಡಿ.ಸಿ.ಎಂ. ಲೇಔಟ್ನಲ್ಲಿ ಬರುವ ಶಿವರಾಂ ಕಾರಂತ ಉದ್ಯಾನವನದ ಅಭಿವೃದ್ಧಿಗಾಗಿ ರೂ.75 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ಹರಿಹರ ತಾಲ್ಲೂಕು ಮಹಜೇನಹಳ್ಳಿ ಗ್ರಾಮದ ರಿಸನಂ:9/2ರಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲು ರೂ.25 ಲಕ್ಷ, ದಾವಣಗೆರೆ ನಗರದ ಶಾಮನೂರು ರಿಸನಂ: 10/1ರಲ್ಲಿನ ಉದ್ಯಾನವನ ಅಭಿವೃದ್ಧಿಗಾಗಿ ರೂ.85 ಲಕ್ಷ,
ರೂ.16.63 ಲಕ್ಷಗಳ ಸರ್ಕಾರಕ್ಕೆ ಪಾವತಿ ಮಾಡಬಹುದಾದ ಸೆಸ್ಗಾಗಿ ಕಾಯ್ದಿರಿಸಲಾಗಿದೆ.
2025-26ನೇ ಸಾಲಿನ ಹೊಸ ಕಾಮಗಾರಿಗಳ ವೆಚ್ಚಕ್ಕಾಗಿ ರೂ.10.25 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ದಾವಣಗೆರೆ ನಗರದ ಜೆ.ಹೆಚ್.ಪಟೇಲ್ ಬಡಾವಣೆಯ ಬಿ, ಸಿ, ಮತ್ತು ಡಿ ಬ್ಲಾಕ್ನಲ್ಲಿ ಹಾಳಾಗಿರುವ ಒಳಚರಂಡಿ ದುರಸ್ಥಿ ಪಡಿಸಲು ರೂ.5 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ನಗರದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ರೂ.5 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಅವಶ್ಯಕ ಎಲ್.ಇ.ಡಿ. ಬೀದಿ ದೀಪಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆಕಲ್ಪಿಸಲು ರೂ.25 ಲಕ್ಷಗಳನ್ನು ಇಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕರಾದ ಬಿ. ಪಿ. ಹರೀಶ್, ಕೆ. ಎಸ್. ಬಸವಂತಪ್ಪ ಮತ್ತಿತರರು ಹಾಜರಿದ್ದರು.